ಬದುಕಿಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಅಕ್ಕರೆಯಿಂದ ಅಕ್ಷರವನ್ನು ಕಲಿಸಿ ನಾಗರಿಕರನ್ನು ನಾಡಿನ ಸತ್ಪ್ರಜೆಯಾಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು💐💐💐

ದೇಶದ ಶೈಕ್ಷಣಿಕ ವ್ಯವಸ್ಥೆಗೆ ಮೌಲ್ಯ ನೀಡಿರುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು 1962ರಿಂದಲೂ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಬದುಕಿಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಶಿಕ್ಷಕರ ದಿನಾಚರಣೆ.

READ ALSO

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ದಾಸ ಶ್ರೇಷ್ಠರಾದ ಪುರಂದರದಾಸರೇ ಗುರುವಿನ ಪ್ರಾಮುಖ್ಯತೆಯನ್ನು ಬಲು ಸೊಗಸಾಗಿಯೇ ವಿವರಿಸಿದ್ದಾರೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಉಕ್ತಿಯಂತೆ ನಡೆದುಕೊಳ್ಳುತ್ತಿದ್ದ ಸಂದರ್ಭವೂ ಇತ್ತು. ಎಂದರೆ, ಗುರುವಿನಲ್ಲಿ ತನ್ನ ಅಧೀನತೆ ಕಂಡಾಗ ಶಿಷ್ಯನಲ್ಲಿ ಜ್ಞಾನೋದಯ ಸಾಧ್ಯ. ಗುರುವಿನ ಮೂಲಕ ಕೇಳುವ ಪಾಠ, ಪ್ರವಚನ, ವಿಚಾರಗಳಿಂದ ಶಿಷ್ಯನ ಸರ್ವಾಂಗೀಣ ಬೆಳವಣಿಗೆ ಆಗುತ್ತದೆ ಎಂಬುದು ಇದರ ಯಥಾರ್ಥ.

ವಿದ್ಯಾರ್ಥಿ ಜೀವನವನ್ನು ನೆನೆಪಿಸಿಕೊಂಡರೆ ಹಲವಾರು ಶಿಕ್ಷಕರ ಚಿತ್ರಗಳು ಸ್ಮೃತಿಪಟಲದಲ್ಲಿ ಮೂಡುತ್ತವೆ. ಪ್ರತಿಯೊಬ್ಬನ ಬದುಕಿನಲ್ಲಿ ಶಿಕ್ಷಣವನ್ನು ಪಡೆಯುವಾಗ ಶಿಕ್ಷಕರ ಪ್ರವೇಶವಾಗಿರುವುದು ನಿಜ. ದಾರಿ ತಪ್ಪಿದಾಗ ತಿದ್ದಿ, ಮೌಲ್ಯಯುತ ಶಿಕ್ಷಣ ಒದಗಿಸಿ ಸಮಾಜದಲ್ಲಿ ತನಗೂ ಒಂದು ಅಸ್ಮಿತೆ ಇದೆ ಎಂಬುದನ್ನು ಸಾಧಿಸುವಂತೆ ಮಾಡಿದ ಗುರುಗಳನ್ನು ಮರೆಯಲು ಅಸಾಧ್ಯ. ಅಂಥ ಶಿಕ್ಷಕರನ್ನು ಸ್ಮರಿಸುವ ದಿನವೇ ಶಿಕ್ಷಕರ ದಿನಾಚರಣೆ.