ಶಶಿಕಲಾ ನಟರಾಜನ್ ಬೆಂಬಲಿಗರ ಕಾರು ಅಗ್ನಿಗಾಹುತಿ! ಅಪಾರ ಪ್ರಮಾಣದ ಪಟಾಕಿ ತುಂಬಿದ ಕಾರಣ ಹೊತ್ತಿ ಉರಿದ ಕಾರು

ಚೆನ್ಮೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಕಲಾ ಸ್ವಾಗತಕ್ಕೆ ಕಾಯುತ್ತಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಕಾರುಗಳು ಸುಟ್ಟು ಕರಕಲಾಗಿದೆ.

ಕೃಷ್ಣಗಿರಿ ಸಮೀಪದ ಟೋಲ್ ಗೇಟ್ ಬಳಿಯಲ್ಲಿ ಶಶಿಕಲಾ ನಟರಾಜನ್ ಸ್ವಾಗತಕ್ಕೆ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನಿಂದ ಶಶಿಕಲಾ ನಟರಾಜನ್ ಈಗಾಗಲೇ ತಮಿಳುನಾಡಿನತ್ತ ಪ್ರಯಾಣಿಸುತ್ತಿದ್ದಾರೆ. ಈ ವೇಳೆಯಲ್ಲಿ ಪಟಾಕಿ ತುಂಬಿಸಿಟ್ಟಿದ್ದ ಎರಡು ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲಿಯೇ ಕಾರುಗಳು ಸುಟ್ಟು ಕರಕಲಾಗಿವೆ.

READ ALSO

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಾರಿನಲ್ಲಿ ಪಟಾಕಿಯನ್ನು ತುಂಬಿಸಿಟ್ಟಿರುವುದೇ ಘಟನೆಗೆ ಕಾರಣವೆನ್ನಲಾಗುತ್ತಿದೆ.