ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಿ: ಪ್ರಶಾಂತ್ ಕುಮಾರ್

ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಹಿರೇಬಲ್ಲ ಗ್ರಾಮದ ಹಾಲಿನ ಡೈರಿ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ರವರು ಮಾತನಾಡುತ್ತಾ ಯೋಜನೆಯು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಕಾರ್ಯಕ್ರಮವು ಒಂದು. ಇಂದಿನ ದಿನ ಆಮ್ಲಜನಕದ ಕೊರತೆಯಿಂದ ಮನುಕುಲವೇ ಪರದಾಡುವಂತಾಗಿದೆ. ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದರಿಂದ ಒಳ್ಳೆಯ ಆಮ್ಲಜನಕವನ್ನು ಪಡೆಯಬಹುದೆಂದು ತಿಳಿಸಿದರು. ಹಾಗೂ ಕೊರೋನ ಪರಿಸ್ಥಿತಿಯಲ್ಲಿ ಕ್ಷೇತ್ರದಿಂದ ಪೂಜ್ಯರು ನೀಡಿರುವ ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ರೋಗಿಗಳ ಉಚಿತ ವಾಹನದ ವ್ಯವಸ್ಥೆ ಮಾಡುತ್ತಿರುವುದರ ಬಗ್ಗೆ ತಿಳಿಸಿದರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

READ ALSO

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿಯಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕೊರೋನಾ ವೇಳೆಯಲ್ಲಿ ದಿನಸಿ ಕಿಟ್ ವಿತರಣೆ ರೋಗಿಗಳಿಗೆ ವಾಹನ ವ್ಯವಸ್ಥೆ ನಿರ್ಗತಿಕರಿಗೆ ಮಾಶಾಸನ ವಿತರಣೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಇಂತಹ ಕಾರ್ಯಕ್ರಮಗಳ ಜೊತೆಗೆ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಕಾರ್ಯಕ್ರಮ ನಡೆಸುತ್ತಿರುವುದು ಯೋಜನೆಯ ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.

ನಂತರ ಈ ಭಾಗದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಹರೀಶ್ ಗೌಡ ರವರು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯು ಜನತೆಗೆ ಆರ್ಥಿಕ ಸಬಲೀಕರಣ ದೊಂದಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಒಂದು ಸರ್ಕಾರೇತರ ಸಂಸ್ಥೆಯು ಸರ್ಕಾರದೊಂದಿಗೆ ಹಲವು ಯೋಜನೆಗಳನ್ನು ಹಾಕಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ. ಅಲ್ಲದೆ ಗ್ರಾಮದ ಜನರು ತಮ್ಮ ಜಮೀನಿನ ಪಹಣಿ ಗಳನ್ನು ತಂದು ಗ್ರಾಮ ಪಂಚಾಯಿತಿ ಮೂಲಕ ಮನವಿಯನ್ನು ನೀಡಿ. ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಇಂದ ಉಚಿತವಾಗಿ ಗಿಡವನ್ನು ದೊರಕಿಸಿಕೊಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡೈರಿ ಅಧ್ಯಕ್ಷರಾದ ರವಿ ರವರು ಯೋಜನೆಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮತ್ತು ಇನ್ನೂ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸುವಂತೆ ಆಶೀಸಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಶ್ವತಪ್ಪ. ಯಶೋದಮ್ಮ ರೂಪ. ಅಂಗನವಾಡಿ ಶಿಕ್ಷಕಿ ಮಾಲವತಿ. ಆಶಾ ಕಾರ್ಯಕರ್ತೆ ಪ್ರಭಾವತಿ ಧರ್ಮಸ್ಥಳ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ವೆಂಕಟಲಕ್ಷ್ಮಮ್ಮ ಉಪಾಧ್ಯಕ್ಷರಾದ ಕಾಂತ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರಾದ ಚೇತನ್ ಸೇವಾ ಪ್ರತಿನಿಧಿ ಉಷಾ. ಹಾಗೂ ಸಂಘದ ಸದಸ್ಯರು .ಗ್ರಾಮಸ್ಥರು ಭಾಗವಹಿಸಿದ್ದರು.