
ಬೆಳ್ತಂಗಡಿ : ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಟ್ಯಾಕ್ಸಿ ವಾಹನ ಚಾಲಕ ವಾಸು ಎಂಬವರ ಮೇಲೆ ಬೆಳ್ಳಂಬೆಳಗ್ಗೆ ತಲವಾರು ದಾಳಿ ನಡೆದಿತ್ತು ಟ್ಯಾಕ್ಸಿ ವಾಹನ ಚಾಲಕ ವಾಸು ಎಂಬವರ ಮೇಲೆ ಅವರ ಮಗನೇ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಾಸು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದ ವಾಸು ರವರು, ಇಂದು ಬೆಳಗ್ಗಿನ ಜಾವ ವಾಕಿಂಗ್ ಮಾಡೋದನ್ನು ಕಾದು ಕುಳಿತಿದ್ದ ಮಗ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಯಾನಂದ(38) ಈ ಕೃತ್ಯ ನಡೆಸಿದ್ದು, ನಂತರ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
