ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದು ಅವರನ್ನು ಅವಮಾನಿಸಿದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ! HJS ಆಗ್ರಹ

ಮುಂಬೈ: ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದು ಅವರನ್ನು ಅವಮಾನಿಸಿದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು !

ಮೊಹಮ್ಮದ್ ಫೈಜ್ ಖಾನ್ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು ಮತ್ತು ಅಯೋಧ್ಯೆಗೆ ಮಣ್ಣು ತರುವ ಅಟ್ಟಹಾಸದಿಂದ ಹಿಂದೆ ಸರಿಯಬೇಕು ! ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಅನೇಕ ಹಿಂದೂಗಳ ಪ್ರಾಣಾಹುತಿ, ನೂರಾರು ವರ್ಷಗಳ ಹೋರಾಟ ಮತ್ತು ೫೦೦ ವರ್ಷಗಳ ದೀರ್ಘ ಪ್ರತೀಕ್ಷೆಯ ಫಲವಾಗಿ ಆಗಸ್ಟ್ ೫ ರಂದು ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯದ ಶುಭಾರಂಭವಾಗುತ್ತಿದೆ. ಈ ಕ್ಷಣ ಸಂಪೂರ್ಣ ಹಿಂದೂ ಸಮಾಜಕ್ಕ್ಕೆ ತುಂಬಾ ಆನಂದೋತ್ಸವವಾಗಿದೆ. ಭಾರತೀಯ ಮುಸ್ಲಿಮರು ಆಕ್ರಮಣಕಾರಿ ಬಾಬರ್‌ನ ಕುರುಹುಗಳಿಗೆ ತಿಲಾಂಜಲಿ ನೀಡಿ ಪ್ರಭು ಶ್ರೀರಾಮನ ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ಸಹಕರಿಸಿದ್ದರೆ ಈ ಸಂಘರ್ಷವನ್ನು ತಪ್ಪಿಸಬಹುದಿತ್ತು. ತದ್ವಿರುದ್ಧವಾಗಿ, ಮುಸ್ಲಿಂ ಸಮಾಜವು ವಿರೋಧ ಮಾಡಲು ಪಣತೊಟ್ಟಿತು. ಅದರ ನಂತರವೂ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಪ್ರಜಾಸತ್ತಾತ್ಮಕವಾದ ಪ್ರಕ್ರಿಯೆಯ ಮೂಲಕ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಈಗ ಪುನಃ ಶ್ರೀರಾಮ ದೇವಾಲಯದ ಅಡಿಪಾಯಕ್ಕೆ ಮಣ್ಣು ತರಲು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಒತ್ತಾಯದಿಂದಾಗಿ ವಿವಾದ ಉದ್ಭವಿಸಿದೆ. ಇಂದಿನವರೆಗೂ ರಾಮ ಮಂದಿರಕ್ಕೆ ಮುಸ್ಲಿಮರ ವಿರೋಧದಿಂದಾಗಿ ಹಿಂದೂಗಳ ಮನಸ್ಸಿನಲ್ಲಿ ಈ ಕೃತಿಯ ಬಗ್ಗೆ ವಿರೋಧದ ಭಾವನೆ ಮೂಡುವುದು ಸಹಜವಾಗಿದೆ. ಒಂದು ಪಕ್ಷ ಮೊಹಮ್ಮದ್ ಫೈಜ್ ಖಾನ್ ಅವರ ಭಾವನೆಗಳು ಪವಿತ್ರವಾಗಿವೆ, ಅವರು ರಾಮಭಕ್ತರಾಗಿದ್ದಾರೆ ಎಂದು ನಂಬಿದರೂ ಅವರು ಮೊದಲು ಹಿಂದೂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು. ಆದ್ದರಿಂದ, ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮಭೂಮಿಯಲ್ಲಿ ಭೂಮಿಪೂಜೆಯ ಮಹತ್ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದು, ಈ ಸ್ಥಳದಲ್ಲಿ ಯಾವುದೇ ವಿವಾದಗಳು ಸೃಷ್ಟಿಯಾಗಾದಂತೆ ಮೊಹಮ್ಮದ್ ಫೈಜ್ ಖಾನ್ ನೋಡಬೇಕು. ಇದಕ್ಕಾಗಿ ಫೈಜ್ ಖಾನ್ ಭೂಮಿಪೂಜೆಗೆ ಮಣ್ಣು ತರುವ ಅಟ್ಟಹಾಸವನ್ನು ಕೈಬಿಟ್ಟು ಹಿಂದೆ ಸರಿಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದ್ದಾರೆ.


ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎನ್ನುವುದು ಅವರ ಅವಮಾನ !
ಮೊಹಮ್ಮದ ಫೈಜ್ ಖಾನ್ ಇವರ ಸೋಶಿಯಲ್ ಮೀಡಿಯಾದ ‘ಪೋಸ್ಟ್’ನಲ್ಲಿ ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಉಲ್ಲೇಖಿಸಿದ್ದಾರೆ. ‘ಇಮಾಮ್’ ಎಂದರೆ ‘ನಮಾಜುಪಠಣ ಮಾಡುವವರು, ಇಸ್ಲಾಮ್ ನಂಬುವವರು ಮತ್ತು ಅದಕ್ಕನುಸಾರ ಆಚರಣೆ ಮಾಡುವವರು’ ! ಪ್ರಭು ಶ್ರೀರಾಮನು ನಮಾಜುಪಠಣ ಮಾಡುವವರೂ ಆಗಿರಲಿಲ್ಲ ಹಾಗೂ ಇಸ್ಲಾಮಿನ ಅನುಯಾಯಿಯೂ ಆಗಿರಲಿಲ್ಲ. ಇಸ್ಲಾಂ ಸ್ಥಾಪನೆಯಾಗುವ ಲಕ್ಷಾಂತರ ವರ್ಷಗಳ ಮೊದಲೇ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನು ಅವತರಿಸಿದನು. ಆದ್ದರಿಂದ, ಇಸ್ಲಾಂನಲ್ಲಿ ’ಇಮಾಮ್’ ಎಂಬುವುದರ ಅರ್ಥ ಏನೇ ಇರಲಿ, ಅದನ್ನು ಪ್ರಭು ರಾಮನಿಗಾಗಿ ಬಳಸುವುದೆಂದರೆ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮುಂತಾದ ಎಲ್ಲ ದೃಷ್ಟಿಯಲ್ಲಿ ತಪ್ಪಾಗಿದೆ. ಮತ್ತೊಂದೆಡೆ, ಅಯೋಧ್ಯೆಯ ಶ್ರೀರಾಮ ಮಂದಿರ ಸಹಿತ ಭಾರತದ ಸಾವಿರಾರು ಮಂದಿರಗಳನ್ನು ಧ್ವಂಸ ಮಾಡಿದ ಇಸ್ಲಾಮೀ ಆಕ್ರಮಣಕಾರರ, ಮೂರ್ತಿ ಪೂಜೆಯನ್ನು ನಂಬದ ಪಂಥದ ‘ಇಮಾಮ್’ ಎಂದು ಕರೆದು ಫೈಜ್ ಖಾನ್ ಇವರು ಪ್ರಭು ಶ್ರೀರಾಮನನ್ನು ಅವಮಾನಿಸಿದ್ದಾರೆ. ಆದ್ದರಿಂದ, ಫೈಜ್ ಖಾನ್ ಸಂಪೂರ್ಣ ಹಿಂದೂ ಸಮಾಜದ ಮತ್ತು ಶ್ರೀರಾಮನ ಭಕ್ತರಿರ ಬಹಿರಂಗ ಕ್ಷಮೆಯಾಚಿಸಬೇಕು, ಎಂದು ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.

Spread the love
  • Related Posts

    ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!

    ಬೆಂಗಳೂರು: ಮಧ್ಯಪ್ರಾಚ್ಯ ಯುದ್ದ (Middle East War) ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಪೆಟ್ರೋಲ್, ಡಿಸೇಲ್ ಸಿಗದೇ ಒದ್ದಾಡುತ್ತಿರುವ ಜನ ಇವಿ ವಾಹನಗಳ ಮೊರೆ ಹೋಗಿದ್ದಾರೆ. ಇದರಿಂದ ಒಂದೇ ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ ವಾಹನಗಳು ಮಾರಾಟವಾಗಿವೆ.ಯುದ್ಧದಿಂದಾಗಿ ಒಂದೆಡೆ ಜನ ಅಡುಗೆ ಮನೆಗೆ…

    Spread the love

    ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಬಳಕೆಗೆ ಷರತ್ತುಬದ್ಧ ಅನುಮತಿ

    ನವದೆಹಲಿ: ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಬಳಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ. ಈ ಬಗ್ಗೆ ಪರಿಸರ, ಅರಣ್ಯ ಮತ್ತು…

    Spread the love

    You Missed

    ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!

    • By admin
    • April 3, 2026
    • 22 views
    ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!

    ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಬಳಕೆಗೆ ಷರತ್ತುಬದ್ಧ ಅನುಮತಿ

    • By admin
    • April 3, 2026
    • 23 views
    ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಬಳಕೆಗೆ ಷರತ್ತುಬದ್ಧ ಅನುಮತಿ

    ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿದ್ದ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೋಟೋ ಶೂಟ್ ಗೆ ಶುಲ್ಕ ನಿಗದಿ

    • By admin
    • April 2, 2026
    • 29 views
    ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿದ್ದ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೋಟೋ ಶೂಟ್ ಗೆ ಶುಲ್ಕ ನಿಗದಿ

    ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

    • By admin
    • April 1, 2026
    • 19 views
    ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

    ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ ಶಿಕ್ಷಣ ಪ್ರೇಮಿ ಮನೋಹರ್ ಬಳಂಜ ಪುನರಾಯ್ಕೆ

    • By admin
    • April 1, 2026
    • 37 views
    ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ ಶಿಕ್ಷಣ ಪ್ರೇಮಿ ಮನೋಹರ್ ಬಳಂಜ ಪುನರಾಯ್ಕೆ

    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    • By admin
    • April 1, 2026
    • 45 views
    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”