BMS ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿ ಹಾಗೂ ಉಚಿತ ಮಾಸ್ಕ್ ಮತ್ತು ಸ್ಯಾನಿಟರಿಸ್ ಕಿಟ್ ವಿತರಣೆ ಕಾರ್ಯಕ್ರಮ

ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಇದರ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಉಚಿತ ಮಾಸ್ಕ್ ಮತ್ತು ಸ್ಯಾನಿಟರಿಸ್ ಕಿಟ್ ವಿತರಣೆ ಕಾರ್ಯಕ್ರಮ ಗರ್ಡಾಡಿ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ನೂತನ ಬಿ.ಎಂ.ಎಸ್ ನ ಗ್ರಾಮ ಸಮಿತಿಯನ್ನು ‌ ರಚಿಸಲಾಯಿತು ಅದ್ಯಕ್ಷರಾಗಿ ಹರೀಶ್ ಕೋಟ್ಯಾನ್ ,ಕಾರ್ಯದರ್ಶಿಯಾಗಿ ವಸಂತ ಬಿ.ಬಂಗೇರ ಮತ್ತು ಸಂಘಟನಾ ಕಾರ್ಯದರ್ಶಿ ರಾಜೇಶ್ ಅಚಾರ್ಯ ನಂದಿಬೆಟ್ಟ ಮತ್ತು‌ ಉಪಾದ್ಯಕ್ಷರಾಗಿ ರೇಷ್ಮಾ ವಿ.ನಂದಿಬೆಟ್ಟ ಅವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು

READ ALSO

ನಂತರ ಬಿ.ಎಂ.ಎಸ್ ನ ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ ಬಿ.ಕೆ ಅವರು ಭಾರತೀಯ ಮಜ್ದೂರ ಸಂಘದ ಕಾರ್ಯ ಚಟುವಟಿಕೆ ಕುರಿತು‌ ಮತ್ತು ದ್ಯೇಯ ಉದ್ದೇಶದ ಕುರಿತು ಮಾಹಿತಿ ನೀಡಿದರು ಮತ್ತು ಬಿ.ಎಂ‌ಎಸ್ ನ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ಅವರು ಕಾರ್ಮಿಕ ಸೌಲಭ್ಯ ಮತ್ತು ನೊಂದಾವಣೆ ಕುರಿತು ಮಾಹಿತಿ ನೀಡಿದರು.

ಕಾರ್ಮಿಕರಿಗೆ ಕಾರ್ಮಿಕ ಇಲಾಖಾ ಸಹಯೋಗದೊಂದಿಗೆ ಮಾಸ್ಕ್ ಹಾಗೂ ಸ್ಯಾನಿಟರಿಸ್ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಾಗೂ ಸ್ಥಳೀಯ ಪ್ರಮುಖರಾದ ಪ್ರಭಾಕರ ಮುದ್ದನೊಟ್ಟು ,ಪ್ರವೀಣ ಬಂಗೇರ ನಂದಿಬೆಟ್ಟ ,ಸಂದೇಶ ಶೆಟ್ಟಿ ಬಾರ್ದಜೆ ಉಪಸ್ಥಿತರಿದ್ದರು