ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!

ಬೆಂಗಳೂರು: ಮಧ್ಯಪ್ರಾಚ್ಯ ಯುದ್ದ (Middle East War) ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಪೆಟ್ರೋಲ್, ಡಿಸೇಲ್ ಸಿಗದೇ ಒದ್ದಾಡುತ್ತಿರುವ ಜನ ಇವಿ ವಾಹನಗಳ ಮೊರೆ ಹೋಗಿದ್ದಾರೆ. ಇದರಿಂದ ಒಂದೇ ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ ವಾಹನಗಳು ಮಾರಾಟವಾಗಿವೆ.ಯುದ್ಧದಿಂದಾಗಿ ಒಂದೆಡೆ ಜನ ಅಡುಗೆ ಮನೆಗೆ ಸಿಲಿಂಡರ್ ಸಿಗದೇ ಒದ್ದಾಡುತ್ತಿದ್ರೇ, ಮತ್ತೊಂದೆಡೆ ಪೆಟ್ರೋಲ್, ಡಿಸೇಲ್ ಸಿಗದೇ ವಾಹನದಲ್ಲಿ ಹಿಂದೂ ಮುಂದು ನೋಡುವಂತಾಗಿದೆ. ಹೀಗಾಗಿ ರಾಜ್ಯದ ಜನ ನಿಧಾನವಾಗಿ ಎಲೆಕ್ಟ್ರಿಕ್ ವೆಹಿಕಲ್ಸ್‌ನತ್ತ ಮುಖ ಮಾಡಿದ್ದು, ಕಳೆದ ಒಂದು ತಿಂಗಳಿನಿಂದ ಇವಿ ವೆಹಿಕಲ್ಸ್‌ಗಳ ಮಾರಾಟ, ಬುಕ್ಕಿಂಗ್ ಹೆಚ್ಚಾಗಿದೆ.

ಇರಾನ್-ಇಸ್ರೇಲ್-ಅಮೇರಿಕಾ ಕದನಕ್ಕೆ ಸದ್ಯಕ್ಕೆ ವಿರಾಮ ಬೀಳುತ್ತಿಲ್ಲ. ಈ ದೀರ್ಘಕಾಲದ ಯುದ್ದದ ಪರಿಣಾಮ ರಾಜ್ಯದ ಮೇಲೆ ಬಿದ್ದಿದ್ದು ಜನಸಾಮಾನ್ಯರು ತತ್ತರಿಸುವಂತಾಗಿದೆ. ಪ್ರಮುಖವಾಗಿ ಪೆಟ್ರೋಲ್, ಡಿಸೇಲ್, ಸಿಎನ್‌ಜಿಗಾಗಿ ಕಿಲೋಮೀಟರ್‌ಗಟ್ಟಲೇ ಕ್ಯೂ ಹಚ್ಚಿ ನಿಲ್ಲೋ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಜನ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ ಮಾರ್ಚ್ 1ರಿಂದ 31ರವರೆಗೆ 28,765 ಎಲೆಕ್ಟ್ರಿಕ್ ವಾಹನಗಳು ರೆಜಿಸ್ಟ್ರೇಷನ್ ಆಗಿದ್ದು, ನಿಧಾನವಾಗಿ ಇವಿ ವೆಹಿಕಲ್ಸ್ಗಳನ್ನು ಕೊಳ್ಳುವುವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೂಲಕ ಕಳೆದ ತಿಂಗಳವರೆಗೆ 7,56,637 ಎಲೆಕ್ಟ್ರಿಕ್ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿವೆ. ಈ ಹಿಂದೆ ಇವಿ ವಾಹನಗಳೆಂದ್ರೇ ಮೂಗು ಮುರಿಯೋರು ಎಲೆಕ್ಟ್ರಿಕ್ ವಾಹನಗಳತ್ತ ಹೊರಳುತ್ತಾ ಇದ್ದಾರೆ. ಇನ್ನೂ ಇವಿ ಬೈಕ್, ಇವಿ ಕಾರ್, ಇವಿ ಬಸ್ ಸೇರಿದಂತೆ ದಿನದಿಂದ ದಿನಕ್ಕೆ ಇವಿ ವಾಹನಗಳ ಬುಕ್ಕಿಂಗ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ.

ತೆರಿಗೆ ಹೆಚ್ಚಳಕ್ಕೂ ಮುನ್ನ ಭಾರೀ ಬುಕ್ಕಿಂಗ್

ಜೊತೆಗೆ ಕರ್ನಾಟಕ ಮೋಟಾರು ವಾಹನಗಳ ತೆರಿಗೆ(ತಿದ್ದುಪಡಿ) ವಿಧೇಯಕ-2026ರ ಪ್ರಕಾರ 10 ಲಕ್ಷ ರೂ.ವರೆಗಿನ ಇವಿ ವಾಹನಗಳಿಗೆ 5% ಪ್ರತಿಶತ ತೆರಿಗೆ, 10 ಲಕ್ಷ ರೂ.ಯಿಂದ 25 ಲಕ್ಷ ರೂ.ವರೆಗಿನ ವಾಹನಗಳಿಗೆ 8 % ಪ್ರತಿಶತ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ. ಈ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತವೊಂದೇ ಬಾಕಿಯಿದೆ. ಈ ಹಿನ್ನೆಲೆ ಇವಿ ವೆಹಿಕಲ್‌ಗಳ ಬೆಲೆ ಹೆಚ್ಚಳವಾಗ್ತಿರೋದ್ರಿಂದ, ಜನ ಎಲೆಕ್ಟ್ರಿಕ್ ವಾಹನಗಳನ್ನು ಬೇಗ ಬೇಗ ಬುಕ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಯುದ್ಧದಿಂದಾಗಿ ಜನ ಪರಿಸರಸ್ನೇಹಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ

Spread the love
  • Related Posts

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    ಮಂಗಳೂರು, ಜುಲೈ 7: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು…

    Spread the love

    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    ಕೇರಳ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸೋಮವಾರ (ಜು.06) ರಾತ್ರಿಯಿಂದ ಸುರಿಯುತ್ತಿರುವ ಎಡೆಬಿಡದ ಭಾರೀ ಮಳೆಗೆ ಮಂಗಳವಾರ (ಜು.07) ಭೀಕರ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯ ಕಲ್ಲಾಡಿ ಬಳಿಯ ಮೀನಾಕ್ಷಿ ಸೇತುವೆ ಹತ್ತಿರ ಈ ಘಟನೆ ನಡೆದಿದ್ದು,…

    Spread the love

    You Missed

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    • By admin
    • July 7, 2026
    • 58 views
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿನ್ನೆಲೆ ಜುಲೈ 8ರಂದು ಶಾಲೆಗಳಿಗೆ ರಜೆ

    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    • By admin
    • July 7, 2026
    • 336 views
    ವಯನಾಡಿನಲ್ಲಿ ಭೀಕರ ಭೂಕುಸಿತ ಇಬ್ಬರು ಮೃತಪಟ್ಟಿರುವ ಶಂಕೆ!! 30ಕ್ಕೂ ಅಧಿಕ ಮಂದಿ ಕಣ್ಮರೆ!!!!

    ಅಜಿಕುರಿ ರಸ್ತೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ; ರಸ್ತೆ ಬಂದ್ ಮಾಡಿ ಪ್ರತಿಭಟನೆ

    • By admin
    • July 7, 2026
    • 73 views
    ಅಜಿಕುರಿ ರಸ್ತೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ; ರಸ್ತೆ ಬಂದ್ ಮಾಡಿ ಪ್ರತಿಭಟನೆ

    ರಸ್ತೆಯೋ, ಗುಂಡಿಗಳ ಸರಪಳಿಯೋ? ಹದಗೆಟ್ಟ ರಸ್ತೆಯ ಅಭಿವೃದ್ಧಿ ಮಾಡುವವರು ಯಾರು? ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ; ಸಾರ್ವಜನಿಕರ ಆಕ್ರೋಶ

    • By admin
    • July 6, 2026
    • 112 views
    ರಸ್ತೆಯೋ, ಗುಂಡಿಗಳ ಸರಪಳಿಯೋ? ಹದಗೆಟ್ಟ ರಸ್ತೆಯ ಅಭಿವೃದ್ಧಿ ಮಾಡುವವರು ಯಾರು? ಹಲವು ವರ್ಷಗಳಿಂದ ಡಾಮರೀಕರಣ ಕಾಣದ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ; ಸಾರ್ವಜನಿಕರ ಆಕ್ರೋಶ

    ಮಲೆಯಡ್ಕ ಹಾಟ್ ಮಿಕ್ಸ್ ಘಟಕ ವಿವಾದಕ್ಕೆ ಹೊಸ ತಿರುವು! ಅಧಿಕಾರಿಗಳ ಸರಣಿ ಭೇಟಿ; ಮಲೆಯಡ್ಕದಲ್ಲೇ ನಡೆಯಿತು ಎಸ್‌ಸಿ/ಎಸ್‌ಟಿ ಕುಂದು ಕೊರತೆಗಳ ಸಭೆ

    • By admin
    • July 5, 2026
    • 111 views
    ಮಲೆಯಡ್ಕ ಹಾಟ್ ಮಿಕ್ಸ್ ಘಟಕ ವಿವಾದಕ್ಕೆ ಹೊಸ ತಿರುವು! ಅಧಿಕಾರಿಗಳ ಸರಣಿ ಭೇಟಿ; ಮಲೆಯಡ್ಕದಲ್ಲೇ ನಡೆಯಿತು ಎಸ್‌ಸಿ/ಎಸ್‌ಟಿ ಕುಂದು ಕೊರತೆಗಳ ಸಭೆ

    ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ!!! ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ನಡೆದ ದುರ್ಘಟನೆ

    • By admin
    • July 3, 2026
    • 60 views
    ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ!!! ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ನಡೆದ ದುರ್ಘಟನೆ