ಮಂಗಳೂರು : ವಿದ್ಯಾರ್ಥಿಯೋರ್ವನ ತಲೆಕೂದಲು ಹಾಗೂ ಮೀಸೆ ಬೊಳಿಸುವಂತೆ ರಾಗಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ನಗರದ ವಳಚ್ಚೀಲ್ ನಲ್ಲಿರುವ ಶ್ರೀನಿವಾಸ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅಶ್ವಥ್ (20 ವರ್ಷ), ಜೀಷ್ಣು (20 ವರ್ಷ), ಶ್ರೀಕಾಂತ್ (20 ವರ್ಷ), ರಾಹುಲ್ (21 ವರ್ಷ), ಅಭಿರತ್ ರಾಜೀವ್ (21 ವರ್ಷ), ಮುಕ್ತಾರ್ ಅಲಿ (19 ವರ್ಷ), ಸಾಯಿನಾಥ್ (22 ವರ್ಷ), ಮಹಮ್ಮದ್ ರಝೀಮ್ (20 ವರ್ಷ) ರಾಗಿಂಗ್ ಮಾಡಿ ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳಾಗಿದ್ದಾರೆ.
ನಗರದ ವಳಚ್ಚೀಲ್ ನಲ್ಲಿರುವ ಶ್ರೀನಿವಾಸ ಕಾಲೇಜಿನ ಮೊದಲ ವರ್ಷದ ಬಿ-ಫಾರ್ಮಾ ವಿದ್ಯಾರ್ಥಿಯೋರ್ವನಿಗೆ ಮೀಸೆ ಹಾಗೂ ತಲೆಕೂದಲನ್ನು ತೆಗೆದು ಬರುವಂತೆ ಆರೋಪಿಗಳು ಹೇಳಿದ್ದರು. ಆದರೆ ವಿದ್ಯಾರ್ಥಿ ತಲೆ ಕೂದಲು ಮತ್ತು ಮೀಸೆ ತೆಗೆಯದೇ ಇದ್ದಾಗ ಐದಾರು ದಿನಗಳ ಕಾಲ ನಿರಂತರವಾಗಿ ರಾಗಿಂಗ್ ಮಾಡಿ ಕಿರುಕುಳ ನೀಡಿದ್ದಾರೆ.