ತುಮಕೂರು: ಅಗ್ನಿ ಜ್ವಾಲೆಗೆ
ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ, ಸಿದ್ಧಗಂಗಾ ಸಂಸ್ಥೆಗೆ ಸೇರಿರುವ ಈ ಜೈವಿಕ ವನ ನಾಶವಾಗಿದೆ ಎಂದು ತಿಳಿದುಬಂದಿದೆ.
ಅಪರೂಪದ ಗಿಡಮೂಲಿಕೆಗಳನ್ನು ಹೊಂದಿದ್ದ ತುಮಕೂರು ತಾಲೂಕು ಬಸ್ತಿಬೆಟ್ಟದಲ್ಲಿದ್ದ ಸಸ್ಯಸಂಪತ್ತು ಹಾನಿಗೀಡಾಗಿದ್ದು, ಈ ಜೈವಿಕ ವನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದ್ದು, ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.