TRENDING
Next
Prev

“ಇಂದಿನಿಂದ 18ರಿಂದ 44 ವಯಸ್ಸಿನೊಳಗಿನವರಿಗೆ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ”

“ಇಂದಿನಿಂದ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ”

ಮೇ 1 ರಿಂದ ಕೊರೊನಾ ಲಸಿಕೆಯ 3ನೇ ಹಂತದ ಆಭಿಯಾನ ಆರಂಭವಾಗಲಿದ್ದು, 18 ರಿಂದ 45 ವರ್ಷದವರಿಗೆ ಲಸಿಕೆ ನೀಡಲಾಗುತ್ತೆ. ಅದರಂತೆ ಕೋವಿನ್ ಪ್ಲಾಟ್ ಫಾರ್ಮ್ ಮತ್ತು ಆರೋಗ್ಯ ಸೇತು ಆಯಪ್ ನಲ್ಲಿ ಏಪ್ರಿಲ್ 28 ಅಂದರೆ, ಇಂದಿನಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

READ ALSO

ಕೋವಿನ್ ಪೋರ್ಟಲ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸುವುದು ಹೇಗೆ….?

1) http://cowin.gov.in ಗೆ ಲಾಗ್‌ಇನ್‌ ಆಗಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ

2)ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌ ನಮೂದಿಸಿ.


3)ನಂತರ ವೆರಿಫೈ ಬಟನ್‌ ಒತ್ತಿ.

4)ಲಸಿಕೆ ನೋಂದಣಿ ಎಂಬ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಫೋಟೋ ಇರುವ ಗುರುತಿನ ಚೀಟಿ (4 ಆಯ್ಕೆಗಳು)ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.

5)ನಿಮ್ಮ ಹೆಸರು, ವಿಳಾಸ ಲಿಂಗ, ವಾಸಸ್ಥಳ ನಮೂದಿಸಿ.

6)ಬಳಿಕ ರಿಜಿಸ್ಟರ್‌ ಎಂಬ ಬಟನ್‌ ಒತ್ತಿ. ಆಗ ಯಶಸ್ವಿ ನೋಂದಣಿ ಬಗ್ಗೆ ಸಂದೇಶ ಬರುತ್ತದೆ ಮತ್ತು ಅಕೌಂಟ್‌ ಡಿಟೇಲ್ಸ್‌ ಎಂಬ ಪುಟ ಓಪನ್‌ ಆಗುತ್ತದೆ.

7)ಇಲ್ಲಿ ನೀವು ಲಸಿಕೆ ಪಡೆಯುವ ದಿನಾಂಕ, ಇಷ್ಟಾದ ಬಳಿಕ ನಿಮ್ಮ ವ್ಯಾಪ್ತಿಯಲ್ಲಿ ಇರುವ ಲಸಿಕಾ ಕೇಂದ್ರ/ಆಸ್ಪತ್ರೆಗಳ ವಿವರ ಸ್ಕ್ರೀನ್‌ ಮೇಲೆ ಮೂಡುತ್ತದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಬಹುದು.

8)ಒಂದೇ ಮೊಬೈಲ್‌ ಸಂಖ್ಯೆಯಿಂದ ಒಟ್ಟು ಐವರ ಹೆಸರು ಮಾತ್ರ ನೋಂದಾಯಿಸಬಹುದು.