ಖರ್ಚು ಮಾಡಿದ್ದು 2 ಲಕ್ಷ, ಸಿಕ್ಕಿದ್ದು 10 ರೂಪಾಯಿ: ಇದು ಟೊಮೆಟೊ ಬೆಳೆದ ಚಿತ್ರದುರ್ಗದ ರೈತನ ಕಣ್ಣೀರ ಕಥೆ

ಬೆಂಗಳೂರು: ರೈತನೊಬ್ಬರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ 3ಎಕ್ರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಕೇವಲ 10 ರುಪಾಯಿ ಪಡೆದ ರೈತನ ಕಣ್ಣೀರ ಕಥೆ ಇದಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರೈತ ಲಕ್ಷ್ಮಣ್ ಎಂಬವರು ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದು ಬೆಳೆ ಉತ್ತಮ ಇಳುವರಿ ಕೂಡ ಬಂದಿತ್ತು.

READ ALSO

118 ಬಾಕ್ಸ್ ಟೊಮೆಟೊ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸಾಗಿಸಿದ್ದರು. ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತ ಎಪಿಎಂಸಿ ಅಧಿಕಾರಿಗಳು ನೀಡಿದ ಬಿಲ್ ನೋಡಿ ದಂಗಾಗಿದ್ದಾರೆ. ಬೀಜ, ಗೊಬ್ಬರ, ಕಳೆ, ಕೂಲಿ, ಸಾಕಷ್ಟು ಖರ್ಚು ಮಾಡಿದ್ದರು.

1ಬಾಕ್ಸ್ ನಲ್ಲಿ 12kg ಟೊಮೆಟೊ 1kgಗೆ 4 ರುಪಾಯಿ ದರ 1416 kg ಟೊಮೆಟೊಗೆ 5664 ರುಪಾಯಿ ಸಿಗುತ್ತದೆ ಇದರಲ್ಲಿ ಕೋಲಾರ ಮಾರುಕಟ್ಟೆಗೆ ಟೊಮೆಟೊ ಹಣ್ಣನ್ನು ಕಳಿಸಲು ಟೆಂಪೋ ಬಾಡಿಗೆ-5130, ಕಮಿಷನ್ 416, ಕೂಲಿ-118 (ಮಾರುಕಟ್ಟೆಯಲ್ಲಿ 1ಬಾಕ್ಸ್ ಅನ್ಲೋಡ್ ಮಾಡಲು 1ರೂ 118 ಬಾಕ್ಸ್) ಖರ್ಚು ಕಳೆದು ಕೇವಲ 10 ರೂಪಾಯಿಯನ್ನು Apmcಯವರು ನೀಡಿದ್ದಾರೆ.

ಇದಲ್ಲದೆ ರೈತನಿಗೆ ಬೀಜ, ರಸಗೊಬ್ಬರ, ನೀರು, ವಿದ್ಯುತ್ ಬಿಲ್ಲು, ಕೂಲಿ, ಇವೆಲ್ಲವೂ ಹೆಚ್ಚುವರಿ ಹೊರೆ ಇದಕ್ಕಾಗಿ ಮಾಡಿದ ಸಾಲ ಬೇರೆಯೇ ಇದನ್ನು ತೀರಿಸಲು ಸಾಧ್ಯವಾಗದೇ ರೈತರು ಆತ್ಮಹತ್ಯೆಗಳಂತಹ ಘಟನೆಗಳಿಗೆ ಬಲಿಯಾಗೋದು

ಮಾರುಕಟ್ಟೆಯಲ್ಲಿ 1kg ಟೊಮೆಟೊ ದರ 25ರಿಂದ 30 ರುಪಾಯಿ: ಹೌದು ರೈತ ಕಷ್ಟಪಟ್ಟು ದುಡಿದು ಕೃಷಿ ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಿದಕ್ಕೆಲ್ಲ ಒಟ್ಟು ಸೇರಿ ಕೇವಲ 4 ರುಪಾಯಿ ಅವನ ಪಾಲಾಗುತ್ತೇ ಹಾಗಾದರೆ ಉಳಿದ 26 ರುಪಾಯಿ ಲಾಭ ಯಾರು ಪಡೆಯುತ್ತಾರೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ! ಒಟ್ಟಾರೆ ರೈತನಿಗೆ ಕೊನೆಗೆ ಸಿಗೋದು ಬರೀ ಕಣ್ಣೀರು ಮಾತ್ರ ರೈತನ ಬೆವರು ದಲ್ಲಾಳಿಗೆ ಆದಾಯವಾಗಿ ಮಾರ್ಪಾಡಾಗುತ್ತದೆ.

ಈ 10 ರೂಪಾಯಿ ಬಿಲ್ಲನ್ನು ರೈತ ಲಕ್ಷ್ಮಣ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳುಹಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.