ಉಜಿರೆ :ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ(ರಿ) ಉಜಿರೆ ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ಸೇವಾಭಾರತಿ (ರಿ)ಕನ್ಯಾಡಿ ಹಾಗೂ ಕೆ.ಎಂ.ಸಿ.ಬ್ಲಡ್ ಬ್ಯಾಂಕ್, ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಶ್ರೀ ಜನಾರ್ದನ ದೇವಸ್ಥಾನ ಉಜಿರೆಯ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,’ಹಲವು ಸಂಘಟನೆಗಳ ಸಹಕಾರದಲ್ಲಿ ನಡೆಸುತ್ತಿರುವ ಈ ರಕ್ತದಾನ ಶಿಬಿರ ಮಾದರಿಯಾಗಿದೆ. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಈ ಕಾರ್ಯಕ್ಕೆ ಎಲ್ಲರೂ ಬಹಳ ಉತ್ಸಾಹದಿಂದ ಕೈಜೋಡಿಸಿದ್ದಾರೆ. ರಕ್ತದಾನದ ಮೂಲಕ ನೀವೆಲ್ಲರು ಪುಣ್ಯದ ಕೆಲಸ ಮಾಡುತ್ತಿದ್ದೀರಿ.’ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆಯ ಅಧ್ಯಕ್ಷರಾದ ಧರ್ಣಪ್ಪಗೌಡ, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ|ಪೂರನ್ ವರ್ಮಾ, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀಧರ್ ಕೆ.ವಿ., ಸೇವಾ ಭಾರತಿ (ರಿ)ಕನ್ಯಾಡಿಯ ಸಂಸ್ಥಾಪಕರಾದ ವಿನಾಯಕ ರಾವ್ ಕನ್ಯಾಡಿ, ಸಂಘದ ಗೌರವಾಧ್ಯಕ್ಷರಾದ ಪ್ರಕಾಶ್ ಗೌಡ, ಅಪ್ರಮೇಯ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಮೇಶ್ ಪೈಲಾರ್ ಸ್ವಾಗತಿಸಿ, ಸಿ.ಆರ್.ಪಿ. ವಾರಿಜ ನಿರೂಪಿಸಿ, ಶೇಖರ್ ಗೌಡ ಉಜಿರೆ ವಂದಿಸಿದರು.ಒಟ್ಟು 123 ಯೂನಿಟ್ ರಕ್ತ ಸಂಗ್ರಹಿಸಿ ಕೆ.ಎಂ.ಸಿ. ರಕ್ತ ನಿಧಿಗೆ ನೀಡಲಾಯಿತು.