ಯುವಜನತೆಯನ್ನು ಕೃಷಿಯತ್ತ ಒಲವು ಮೂಡುವಂತೆ ಮಾಡಿದ ಬದುಕು ಕಟ್ಟೋಣ ತಂಡ

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ತಂಡದಿಂದ ಯುವ ಜನತೆಯನ್ನು ಕೃಷಿಯತ್ತ ಒಲವು ಮೂಡಿಸುವ ಸಲುವಾಗಿ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ 60 ಎಕ್ರೆ ಭತ್ತ ಕೃಷಿಗೆ ಚಾಲನೆ ನೀಡಲಾಯಿತು.

ಕಳೆದ ವರ್ಷ ನೆರೆ ಬಂದ ಸಮಯದಲ್ಲಿ ಚಾರ್ಮಾಡಿಯ ಕೊಳಂಬೆಯಲ್ಲಿ ಬದುಕು ಕಟ್ಟೋಣ ತಂಡದಿಂದ ಕೃಷಿ ನಡೆಸಿ ಮಾದರಿಯಾಗಿತ್ತು.

READ ALSO

ಇದರ ನೆನಪಿಗಾಗಿ ತಾಲೂಕಿನೆಲ್ಲೆಡೆ ಹಡೀಲು ಗದ್ದೆ ದತ್ತು ಪಡೆದು ಕೃಷಿಗೆ ಮುಂದಾಗಿದೆ ತಂಡ, ಇಂದು 250 ಮಂದಿಯಿಂದ ನೇಜಿ ನಾಟಿ ಕಾರ್ಯ ನಡೆಯಿತು.

ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಬದುಕು ಕಟ್ಟೋಣ ತಂಡದಿಂದ ಒಂದು ವಿನೂತನ ಪ್ರಯತ್ನ ನಡೆದಿದೆ.

ತಂಡದ ಸಂಯೋಜಕರಾದ ರಾಜೇಶ್ ಪೈ, ಮೋಹನ್ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಕೃಷಿಕರಾದ ಕೆಂಪಯ್ಯ ಮಡಿವಾಳ, ಕಾಂತಪ್ಪ ಮಡಿವಾಳ, ಶೀನ ದೇವಾಡಿಗ, ರಾಜು ಮಡಿವಾಳ, ಶ್ರೀಧರ್ ನಿಡಿಗಲ್ ಮತ್ತಿತರರು ಉಪಸ್ಥಿತರಿದ್ದರು.