ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ: ಪ್ರಕಾಶ್ ಕುಮಾರ್ ಸಲಹೆ

ಶಿಡ್ಲಘಟ್ಟ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಜ್ಞಾನ ಜ್ಯೋತಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ಶಿಡ್ಲಘಟ್ಟ ತಾಲೂಕಿನ ಬಸವಾಪಟ್ಟಣ ಸಾಸುರಾಯ ದೇವಸ್ಥಾನದ ಆವರಣದಲ್ಲಿ ಸಸಿ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು.

ಯೋಜನಾಧಿಕಾರಿ ಪ್ರಕಾಶ್ ಕುಮಾರ್ ರವರು ಮಾತನಾಡುತ್ತಾ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು‌ ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು, ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಎಂದು ಸಲಹೆ ನೀಡಿದರು.

ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಆರೋಗ್ಯ ಸಹಾಯಕಿ ನೀಲಮ್ಮರವರು ಕೊರೋನಾ ಮುಂಜಾಗ್ರತೆಯ ಬಗ್ಗೆ ಅರಿವು ಮೂಡಿಸಿದರು.

ಈ ಸಂಧರ್ಭದಲ್ಲಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪವಿತ್ರ ರವರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ಬಾಲಣ್ಣ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ ಸೇವಾಪ್ರತಿನಿಧಿ ಚೈತ್ರಾ ಉಪಸ್ಥಿತರಿದ್ದರು.

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

    • By admin
    • June 15, 2026
    • 15 views
    ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

    ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಕೀರ್ತಿ HB ನಿಧನ

    • By admin
    • June 15, 2026
    • 51 views
    ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಕೀರ್ತಿ HB ನಿಧನ

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    • By admin
    • June 14, 2026
    • 39 views
    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    • By admin
    • June 13, 2026
    • 81 views
    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    • By admin
    • June 13, 2026
    • 26 views
    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    • By admin
    • June 13, 2026
    • 64 views
    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ