ಶಿಡ್ಲಘಟ್ಟ: ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಶಾಶ್ವತ ಪರಿಹಾರವೆಂಬಂತೆ 2016ರಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆ ಪ್ರಾರಂಭಿಸಿದ್ದು, ಇಂದು ಶಿಡ್ಲಘಟ್ಟ ಬೋದಗೂರು ಎಂಬಲ್ಲಿ ಕೆರೆ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜಶೇಖರ್ ರವರು ಧರ್ಮಸ್ಥಳದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಜನಸಾಮಾನ್ಯರಿಗೆ ಉಪಯೋಗವಾದದ್ದು ಇಂತಹ ಕಾರ್ಯ ಶ್ಲಾಘನೀಯವಾದದ್ದು ಎಂದು ತಿಳಿಸಿದರು.
4 ವರ್ಷಗಳಿಂದ ಕೆರೆಗಳ ಪುನಶೇತನ ಕಾರ್ಯಕ್ರಮ ನಡೆಯುತಿದ್ದು, ಈ ಮಳೆಗಾಲದಲ್ಲಿ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ ಎಂದು ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ನಿರ್ದೇಶಕ ವಸಂತ ಬಿ ಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ವೆಂಕಟಸ್ವಾಮಮಿ ರೆಡ್ಡಿ ಗ್ರಾಮ ಪಂಚಾಯತ್ PDO ಕಾತ್ಯಾಯಿನಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಬೆಳ್ಳುಟ್ಟಿ ಸಂತೋಷ್ ದೊಡ್ಡಮಾರಪ್ಪ ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವಾಸ್ ಅರುಣ ಪ್ರಕಾಶ್ ಮುನಿಯಪ್ಪ ಬೆಳ್ಳುಟ್ಟಿ ರಮೇಶ್ ಕೃಷಿ ಅಧಿಕಾರಿ ಹರೀಶ್ ಮೇಲ್ವಿಚಾರಕಿ ಜ್ಯೋತಿ ಸೇವಾಪ್ರತಿನಿಧಿ ವೆಂಕಟಲಕ್ಷ್ಮಿ ಮುನಿರತ್ನ ಉಪಸ್ಥಿತರಿದ್ದರು.