ಬೆಂಗಳೂರು: ಅಭಿಮಾನಿಗಳು ಕಾತುರದಿಂದ ಕಾದಿದ್ದ ಕೆಜಿಎಫ್ 2 ಟೀಸರ್ ಒಂದು ದಿನ ಮೊದಲೇ ಬಿಡುಗಡೆಯಾಗಿದೆ.
ಈ ಮೊದಲು ಜನವರಿ 8 ರಂದು ಅಂದ್ರೆ ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುವುದು ಎಂದು ಹೊಂಬಾಳೆ ಪ್ರೊಡಕ್ಷನ್ ಹೌಸ್ ಹೇಳಿತ್ತು. ಇದೀಗ ಟ್ವೀಟ್ ಮೂಲಕ ಬದಲಾದ ಸಮಯವನ್ನ ತಿಳಿಸಿರುವ ಪ್ರಶಾಂತ್ ನೀಲ್ ಇಂದು ರಾತ್ರಿ 09:29ಕ್ಕೆ ಟೀಸರ್ ರಿಲೀಸ್ ಮಾಡಿದ್ದಾರೆ
ನಾಳೆ ರಿಲೀಸ್ ಆಗಬೇಕಿದ್ದ ಕೆಜಿಎಫ್ 2 ಟೀಸರ್ ಇಂದು ಆನ್ಲೈನ್ನಲ್ಲಿ ಲೀಕ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆದ ಟೀಸರ್ ಹರಿದಾಡುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಇಂದೇ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ.