ಸಮಾಜವಿರೋಧಿ ಪಿಡುಗುಗಳ ವಿರೋಧ ಮತ್ತು ‘ಸುರಾಜ್ಯ ಅಭಿಯಾನ’ ಈ ವಿಷಯದ ಬಗ್ಗೆ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಗಣ್ಯರ ಭಾಷಣಗಳು

ಮಂಗಳೂರು: ಲಕ್ಷಗಟ್ಟಲೆ ಭೂಮಿ ಕಬಳಿಸುವ ವಕ್ಫ್ ಬೋರ್ಡ್‌ನ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕ; ಇದರ ವಿರುದ್ದ ಹಿಂದೂಗಳು ಹೋರಾಡಬೇಕಿದೆ ! – ನ್ಯಾಯವಾದಿ ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

2013 ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (6 ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ. ಬೋರ್ಡ್‌ನಿಂದ ನಡೆಯುತ್ತಿರುವ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕವಾಗಿದೆ. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ ಕಾನೂನು ಹೋರಾಟ ಮಾಡಬೇಕಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ಅಧ್ಯಕ್ಷ ಹರಿ ಶಂಕರ ಜೈನ್ ಇವರು ಕರೆ ನೀಡಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಆನ್‌ಲೈನ್’ 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು.
ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ‘ಫೇಸ್‌ಬುಕ್ ಪೇಜ್’ನ ಮೂಲಕ ಈ ಅಧಿವೇಶನವನ್ನು 42600 ಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 1 ಲಕ್ಷ 60 ಸಾವಿರಕ್ಕಿಂತಲೂ ಹೆಚ್ಚು ಜನರ ತನಕ ಈ ವಿಷಯವು ತಲುಪಿದೆ.


‘ಕೊರೋನಾ’ದ ಸಂದರ್ಭದಲ್ಲಿ ಜನರ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಂಗ ಹೋರಾಟ ಮಾಡಲಾಯಿತು ! – ನ್ಯಾಯವಾದಿ ಅಮೃತೇಶ ಎನ್.ಪಿ., ಬೆಂಗಳೂರು ಉಚ್ಚ ನ್ಯಾಯಾಲಯ
ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ ಎನ್.ಪಿ. ಇವರು ತಮ್ಮ ಅನುಭವವನ್ನು ಹೇಳಿದರು. ಅವರು. “ಕೊರೋನಾ ಮಹಾಮಾರಿಯ ಕಾಲದಲ್ಲಿ ಲಾಕ್‌ಡೌನ್‌ಅನ್ನು ಜಾರಿಗೆ ತಂದಾಗ ಕರ್ನಾಟಕ ಪೊಲೀಸರು ಜನರ ಮೇಲೆ ಅಮಾನವೀಯವಾಗಿ ದೌರ್ಜನ್ಯ ಮಾಡಿದ್ದಾರೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆವು. ನ್ಯಾಯಾಲಯವು ನಮ್ಮ ಪರವಾಗಿ ತೀರ್ಪನ್ನು ನೀಡುತ್ತಾ ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ಮಾಡುವುದನ್ನು ನಿಲ್ಲಿಸಲು ಹೇಳಿತು. ಈ ಕಾಲಾವಧಿಯಲ್ಲಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಹಣವನ್ನು ಕೀಳುವುದು, ರೋಗಿಗಳಿಗೆ ಮಂಚವನ್ನು ನೀಡದಿರುವುದು, ಮೃತಪಟ್ಟವರ ಶವವನ್ನು ಕುಟುಂಬದವರಿಗೆ ನೀಡದಿರುವುದು ಇತ್ಯಾದಿ ತಪ್ಪುಕೃತ್ಯಗಳ ವಿರದ್ಧ ನಾವು ಸಾರ್ವಜನಿಕ ಹಿತಾಸಕ್ತಿಗಾಗಿ ಅರ್ಜಿಯನ್ನು ಸಲ್ಲಿಸಿದೆವು. ಇವೆಲ್ಲ ತೀರ್ಪು ಜನರ ಪರವಾಗಿ ಬಂದಿತು. ಇವೆಲ್ಲವು ಗುರುಕೃಪೆಯಿಂದ ಸಾಧ್ಯವಾಯಿತು” ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, ‘ಪ್ರಾಚೀನ ಭಾರತೀಯ ಶಿಕ್ಷಣವ್ಯವಸ್ಥೆ ಹಾಗೂ ಸಂಸ್ಕೃತಿಯು ಜಗತ್ತಿನಲ್ಲಿ ಸರ್ವೋತ್ಕೃಷ್ಟವಾಗಿತ್ತು. ಲಾರ್ಡ್ ಮೆಕಾಲೆಯ ನಂತರ ಕಮ್ಯುನಿಸ್ಟ್ ವಿಚಾರದಿಂದ ಕೂಡಿದ ಪಂಡಿತ ನೆಹರುರವರು ಶೈಕ್ಷಣಿಕ ನಿಲುವನ್ನು ನಿರ್ಧರಿಸುವ ಅಧಿಕಾರವನ್ನು ಕಮ್ಯುನಿಸ್ಟರಿಗೆ ನೀಡಿದರು; ಅದರ ಪರಿಣಾಮದಿಂದ ಕಳೆದ ಒಂದು ಸಾವಿರ ವರ್ಷಗಳಲ್ಲಿ ಮೊಗಲರು ಹಾಗೂ ಆಂಗ್ಲರು ಭಾರತದ ಎಷ್ಟು ಹಾನಿ ಮಾಡಲಿಲ್ಲವೋ, ಅಷ್ಟು ಹಾನಿಯನ್ನು ಎಡಪಂಥೀಯ ವಿಚಾರದ ಜನರು ಕಳೆದ 70 ವರ್ಷಗಳಲ್ಲಿ ಮಾಡಿದ್ದಾರೆ. ಈಗ ಹಿಂದೂಗಳು ಸತ್ಯ ಇತಿಹಾಸವನ್ನು ಹಾಗೂ ಸಂಸ್ಕೃತಿಯನ್ನು ಅರಿತುಕೊಂಡು ಹೋರಾಡಲು ಸಿದ್ಧರಾಗಬೇಕು’ ಎಂದು ಹೇಳಿದರು.

‘ಆರೋಗ್ಯ ಸಹಾಯ ಸಮಿತಿ’ಯ ಸಮನ್ವಯಕಿಯಾದ ಅಶ್ವಿನಿ ಕುಲಕರ್ಣಿಯವರು ಮಾತನಾಡುತ್ತಾ ‘ಆಹಾರ ಧಾನ್ಯ, ಪೆಟ್ರೋಲ್- ಡಿಸೆಲ್ ಇತ್ಯಾದಿಗಳಲ್ಲಿನ ಕಲಬೆರಕೆ; ಸರಕಾರದ ಭ್ರಷ್ಟಾಚಾರ; ಗ್ರಾಹಕರ ಲೂಟಿ ಇತ್ಯಾದಿಗಳಿಗೆ ಕಾರಣರಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕಿದೆ. ಇವುಗಳ ವಿರುದ್ಧ ಸುರಾಜ್ಯ ಅಭಿಯಾನದ ಅಂತರ್ಗತ ದೂರು ದಾಖಲಿಸುವುದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಅರ್ಜಿ ಸಲ್ಲಿಸುವುದು ಇತ್ಯಾದಿಗಳ ಮಾಧ್ಯಮದಿಂದ ‘ಆರೋಗ್ಯ ಸಹಾಯ ಸಮಿತಿ’ಯು ಕಾರ್ಯನಿರತವಾಗಿದ್ದು ಇದರಲ್ಲಿ ರಾಷ್ಟ್ರಪ್ರೇಮಿ ಜನರು ಸಹ ಸಹಭಾಗಿಯಾಗಬೇಕು’, ಎಂದು ಕರೆ ನೀಡಿದರು.

Spread the love
  • Related Posts

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ಮೂಡುಬಿದಿರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡುಬಿದಿರೆಯ ಕೇಮಾರುವಿನಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ಅವರು ₹1 ಕೋಟಿ ಅನುದಾನ ಘೋಷಿಸಿದ್ದು, ಈ ಕುರಿತು ಮಠದ ಈಶ ವಿಠಲದಾಸ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.…

    Spread the love

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ರೈತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಚರ್ಚೆ; ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳ ನಿರೀಕ್ಷೆ ಮಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ…

    Spread the love

    You Missed

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    • By admin
    • September 19, 2026
    • 6 views
    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅವಕಾಶ – ಶಾಸಕ ಹರೀಶ್ ಪೂಂಜ

    • By admin
    • September 18, 2026
    • 16 views

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    • By admin
    • September 18, 2026
    • 12 views
    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 24 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 32 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 17 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ