ಜುಲೈ 24-2020 ಶುಕ್ರವಾರ: ಇಂದಿನ ರಾಶಿಭವಿಷ್ಯ ಯಾರಿಗೆ ಶುಭ ಯಾರಿಗೆ ಅಶುಭ ಫಲ ವೀಕ್ಷಿಸಿ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 2:35 ನಂತರ ಪಂಚಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ
ಸಂಜೆ 4:02 ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15

READ ALSO

ಮೇಷ

ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ಮನೆಯವರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಅಗತ್ಯ.

ವೃಷಭ

ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿ. ವೃಥಾ ವೈಮನಸ್ಸು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ–ಕಾರ್ಯಗಳಲ್ಲಿ ಉತ್ಸಾಹ.

ಮಿಥುನ

ಕಣ್ಣು ಅಥವಾ ತಲೆನೋವಿನಿಂದ ಬಳಲುವ ಸಾಧ್ಯತೆ. ಅತಿಯಾದ ವಾದ–ವಿವಾದದಿಂದಾಗಿ ವೈರತ್ವ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ಅನಾವಶ್ಯಕ ದಂಡ ತೆರಬೇಕಾದಿತು.

ಕಟಕ

ಮನೆಯಲ್ಲಿ ಶುಭಕಾರ್ಯಗಳು ನೆರವೇರುವ ಸಾಧ್ಯತೆ. ನೌಕರಿಯಲ್ಲಿ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ. ಬಂಧುಗಳ ಸಮಾಗಮದ ನಿರೀಕ್ಷೆ.

ಸಿಂಹ

ನಿಮ್ಮ ನಿರ್ಣಯಗಳು ಫಲ ನೀಡುವವು. ಆದಾಯದಲ್ಲಿ ಹೆಚ್ಚಳ ಕಂಡುಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ ನಿಮ್ಮದಾಗಲಿದೆ. ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ.

ಕನ್ಯಾ

ನಿಮ್ಮ ಕೆಲಸ–ಕಾರ್ಯಗಳು ಮಂದಗತಿಯಲ್ಲೂ ಪ್ರಗತಿ. ಉದರ ಸಂಬಂಧಿ ಸಣ್ಣಪುಟ್ಟ ತೊಂದರೆಗಳು ಕಂಡುಬರಬಹುದು. ಹೊಸ ಕಾರ್ಯಯೋಜನೆ ಪ್ರಾರಂಭಿಸದಿರುವುದೇ ಒಳ್ಳೆಯದು.

ತುಲಾ

ಸಂಕಷ್ಟಗಳು ಕಡಿಮೆಯಾಗಿ ಕೆಲಸ-ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆಗಳು ತಲೆದೋರಬಹುದು. ಅನಿರೀಕ್ಷಿತ ಅನವಶ್ಯಕ ಖರ್ಚು ಸಂಭವಿಸುವವು.

ವೃಶ್ಚಿಕ

ಆರ್ಥಿಕ ಉನ್ನತಿ ಕಂಡುಬರುವುದು. ಶತ್ರುಗಳ ವಿರುದ್ಧ ಜಯದ ಸವಾರಿ ಮಾಡುವ ಯೋಗ ಕೂಡಿದೆ. ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿ. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಧನು

ಅನವಶ್ಯಕ ಖರ್ಚು ತಲೆದೋರಬಹುದು. ಬಂಧುಗಳ ಭೇಟಿಯ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು. ಸಂಗಾತಿಯಿಂದ ಸಹಕಾರ.

ಮಕರ

ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಂತಾನಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತುಹೋದ ಯೋಜನೆಗಳು ಪುನರಾರಂಭಗೊಳ್ಳುವವು.

ಕುಂಭ

ಆರ್ಥಿಕ ಅನುಕೂಲ ನಿಮ್ಮನ್ನರಸಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವೆಚ್ಚವನ್ನೂ ಮಾಡುವಿರಿ. ನಿಮ್ಮ ಉತ್ತಮ ನಡುವಳಿಕೆಯಿಂದಾಗಿ ಗೌರವಾದರಗಳು ಲಭ್ಯವಾಗುವವು.

ಮೀನ

ನೌಕರರು ಮತ್ತು ಸ್ವಂತ ಉದ್ಯೋಗಿಗಳು ತಪ್ಪು ನಡೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಉತ್ತಮ ಸ್ಥಾನ ದೊರಕುವುದು.