ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

ಬೆಳ್ತಂಗಡಿ: ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಪರಂಪರೆ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ, ಪ್ರಗತಿಬಂಧು ಒಕ್ಕೂಟ ಬೆಳ್ತಂಗಡಿ ಹಾಗೂ ಗುರುವಾಯನಕೆರೆ ಇದರ ಸಂಯುಕ್ತ ಆಶ್ರಯದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾನುವಾರ ಜೈನ್‌ಪೇಟೆ ದೊಡ್ಡಮನೆ ಗದ್ದೆಯಲ್ಲಿ ಆಯೋಜಿಸಿದ್ದ ‘ಕೆಸರ್‌ದ ಕಂಡೊಡೊಂಜಿ ದಿನ’ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಮುಳಿಹುಲ್ಲಿನ ಮನೆಯಲ್ಲಿ ಜೀವನ ನಡೆಸುತ್ತಿದ್ದ ಕುಟುಂಬಗಳು ಇಂದು ಆರ್ಥಿಕವಾಗಿ ಸಬಲಗೊಂಡು ಅದೇ ಮನೆಯಲ್ಲಿ ದುಬಾರಿ ಕಾರುಗಳನ್ನು ನಿಲ್ಲಿಸುವಂತಹ ಬದಲಾವಣೆಗೆ ಸಾಕ್ಷಿಯಾಗಿವೆ. ಈ ಪರಿವರ್ತನೆಯ ಹಿಂದೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆರ್ಥಿಕ ಭದ್ರತೆ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ನೆರವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಎರಡು ಕೋಟಿಗೂ ಅಧಿಕ ಮಂದಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿದ್ದಾರೆ. ಸುಮಾರು 44 ಸಾವಿರ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಭಿವೃದ್ಧಿ ಚಟುವಟಿಕೆಗಳ ಜತೆಗೆ ತುಳುನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ ಎಂದರು.

ಗ್ರಾಮೀಣ ಬದುಕಿನೊಂದಿಗೆ ಬೆರೆಯುವ ಅವಕಾಶ: ಡಿವೈಎಸ್ಪಿ ರೋಹಿಣಿ

ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಮಾತನಾಡಿ, ರಜಾದಿನಗಳಲ್ಲಿ ಹೆಚ್ಚಿನವರು ಮಾಲ್‌ಗಳು ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಆಸಕ್ತಿ ತೋರುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಹಾಗೂ ಕೃಷಿ ಆಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಮಣ್ಣಿನೊಂದಿಗೆ ಬೆರೆಯುವ ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಪರಿಚಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.

ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಶುಭ ಹಾರೈಸಿದರು. ಬೆಳ್ತಂಗಡಿ ಭಜನಾ ಪರಿಷತ್ ಅಧ್ಯಕ್ಷ ರವೀಂದ್ರ, ಗದ್ದೆಗೆ ಸ್ಥಳಾವಕಾಶ ಒದಗಿಸಿದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ದೊಡ್ಡಮನೆ, ರತ್ನಮಾನಸ ಜೀವನ ಶಿಕ್ಷಣ ಕೇಂದ್ರದ ಮೇಲ್ವಿಚಾರಕ ಯತೀಶ್ ಬಳಂಜ ಹಾಗೂ ಜಯಲಕ್ಷ್ಮಿ ದೊಡ್ಡಮನೆ ಉಪಸ್ಥಿತರಿದ್ದರು. ವಿವಿಧ ವಲಯಗಳ ಒಕ್ಕೂಟದ ಅಧ್ಯಕ್ಷರು, ಸೇವಾನಿರತರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಯೋಜನೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಕೆಸರು ಗದ್ದೆ ಓಟ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಹಾಗೂ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಜನತೆ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕೆಸರು ಗದ್ದೆಯ ಆಟೋಟಗಳ ಮೂಲಕ ಗ್ರಾಮೀಣ ಬದುಕಿನ ಸಂಭ್ರಮವನ್ನು ಅನುಭವಿಸಿದರು. ವಿವಿಧ ವಲಯಗಳ ಸದಸ್ಯರು ಕೆಸರು ಗದ್ದೆಯಲ್ಲೇ ಆಕರ್ಷಕ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ ದಿನೇಶ್ ಸ್ವಾಗತಿಸಿದರು. ಯೋಜನಾಧಿಕಾರಿ ಯಶೋಧರ ವಂದಿಸಿದರು. ಕೃಷಿ ವಿಭಾಗದ ಯೋಜನಾಧಿಕಾರಿ ರಾಮ್‌ಕುಮಾರ್ ಹಾಗೂ ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು.

Spread the love
  • Related Posts

    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    ಕೊಟ್ಟಾಯಂ (ಕೇರಳ): ಕೇರಳದಾದ್ಯಂತ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಕೋಟ್ಯಂತರ ಆನೆ ಪ್ರಿಯರ ಹೃದಯ ಗೆದ್ದಿದ್ದ ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಭಾನುವಾರ ಸಿಡಿಲು ಬಡಿದು ದುರಂತವಾಗಿ ಸಾವನ್ನಪ್ಪಿದೆ. ಎರಟ್ಟುಪೆಟ್ಟಾ ಬಳಿಯ ಮೇಲಂಪಾರದಲ್ಲಿ ಈ ಆಘಾತಕಾರಿ…

    Spread the love

    ಕರಾವಳಿಯಲ್ಲಿ ಮುಂದುವರಿದ ಮಳೆ; ರೈತರ ಮೊಗದಲ್ಲಿ ಸಂತಸ,4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಮಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು…

    Spread the love

    You Missed

    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    • By admin
    • October 5, 2026
    • 7 views
    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    ಕರಾವಳಿಯಲ್ಲಿ ಮುಂದುವರಿದ ಮಳೆ; ರೈತರ ಮೊಗದಲ್ಲಿ ಸಂತಸ,4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    • By admin
    • October 5, 2026
    • 7 views
    ಕರಾವಳಿಯಲ್ಲಿ ಮುಂದುವರಿದ ಮಳೆ; ರೈತರ ಮೊಗದಲ್ಲಿ ಸಂತಸ,4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗ: ಸುತ್ತೂರು ಶ್ರೀ

    • By admin
    • October 4, 2026
    • 10 views
    ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗ: ಸುತ್ತೂರು ಶ್ರೀ

    ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳ ಕೊಡುಗೆ ಅಪಾರ; ಸಮಾಜಮುಖಿ ಸೇವೆಗಳಲ್ಲಿ ಧರ್ಮಸ್ಥಳ ದೇಶಕ್ಕೆ ಮಾದರಿ: ಶಾಸಕ ಸಿಮೆಂಟ್ ಮಂಜು

    • By admin
    • October 1, 2026
    • 13 views
    ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳ ಕೊಡುಗೆ ಅಪಾರ; ಸಮಾಜಮುಖಿ ಸೇವೆಗಳಲ್ಲಿ ಧರ್ಮಸ್ಥಳ ದೇಶಕ್ಕೆ ಮಾದರಿ: ಶಾಸಕ ಸಿಮೆಂಟ್ ಮಂಜು

    ಶಾಸಕರ ಹರೀಶ್ ಪೂಂಜರ ಅಧಿವೇಶನದಲ್ಲಿನ ಬಲವಾದ ಧ್ವನಿಗೆ ಜಯ: ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ತಾಲೂಕುಗಳು ಅಧಿಕೃತವಾಗಿ ‘ಬರಪೀಡಿತ ಪ್ರದೇಶ’ ಎಂದು ಘೋಷಣೆ!

    • By admin
    • October 1, 2026
    • 16 views
    ಶಾಸಕರ ಹರೀಶ್ ಪೂಂಜರ ಅಧಿವೇಶನದಲ್ಲಿನ ಬಲವಾದ ಧ್ವನಿಗೆ ಜಯ: ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ತಾಲೂಕುಗಳು ಅಧಿಕೃತವಾಗಿ ‘ಬರಪೀಡಿತ ಪ್ರದೇಶ’ ಎಂದು ಘೋಷಣೆ!

    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    • By admin
    • September 30, 2026
    • 13 views
    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”