ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನಿಸಿದನ್ನು ಪ್ರಶ್ನಿಸಿದ್ದಕ್ಕೆ
ಮಾನ ಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ಕೇಳಿ ಬಂದಿದೆ.

ಪ್ರಕರಣದ ಸಾರಾಂಶ: ದೂರುದಾರೆ ಮಹಿಳೆಗೆ ಗರ್ಡಾಡಿ ಗ್ರಾಮದಲ್ಲಿ ಗಂಡನ ಹೆಸರಿನಲ್ಲಿ ಜಾಗವಿದ್ದು ಅದಕ್ಕೆ ದಿನಾಂಕ 28-3-2025 ರಂದು ಆ ಜಾಗಕ್ಕೆ ಚೇತನಾ, ಅವರ ಸಹೋದರ ಮತ್ತು ಸಹೋದರ, ತಂದೆ ಹಾಗೂ ತಾರನಾಥ ಎಂಬವರು ಅಕ್ರಮವಾಗಿ ಪ್ರವೇಶಿಸಿದ್ದು ಅಡಿಕೆ ಕೃಷಿಯನ್ನು ನಾಶಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಸುಮಾ ಅವರು ಆಕ್ಷೇಪಿಸಿದ್ದು, ಈ ಸಮಯ ಚೇತಾನಾಳ ಸಹೋದರ ಮತ್ತು ತಂದೆ ಮಾನ ಭಂಗ ಮಾಡಲು ಪ್ರಯತ್ನಿಸಿದ್ದು ಬಳಿಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ನೀನು ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಮಗನನ್ನು ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಭಯಭೀತರಾಗಿ ಮಹಿಳೆ ಅವರು ಯಾವುದೇ ದೂರು ನೀಡಿಲ್ಲ. ಆದರೆ ದಿನಾಂಕ: 01.04.2026 ರಂದು ಅವರ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಠಾಣೆಗೆ ಬಂದಾಗ ದೂರುದಾರರ ಪರ ವಕೀಲರಾದ ಟಿಸ್ಮಿ ಅವರು ನೊಂದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ದೂರುದಾರರಿಗೆ 50 ಸಾವಿರ ಮಹಿಳೆ ನೀಡುವಂತೆ ತಾಕೀತು ಮಾಡಿದ್ದಾರೆಂದು ಹಾಗೂ ಜೊತೆಯಲ್ಲಿದ್ದ ಶಿವಾನಂದರವರು ಹಣದ ವಿಚಾರವನ್ನು ವಕೀಲೆಯ ಕಚೇರಿಯಲ್ಲಿ ನೋಡಿಕೊಳ್ಳಿ ಎಂದು ಹೇಳಿದರಿಂದ ಮಹಿಳೆ ಅವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕರಿಮಣಿ ಸರವನ್ನು ಅಡವಿಟ್ಟು ಟಿಸ್ಮಿ ವಕೀಲೆಗೆ 50 ಸಾವಿರ ನೀಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.1 ರಂದು ದೂರು ನೀಡಿದ್ದು ಅದರಂತೆ BNS-2023 (u/s-76,329(3),115(2),351,r/w3(5)) ಅಡಿಯಲ್ಲಿ ಐದು ಜನ ಆರೋಪಿಗಳಾದ ಚೇತನಾ, ಚೇತನಾ ಸಹೋದರ, ತಾರಾನಾಥ್ ಶೆಟ್ಟಿ, ಚೇತನಾ ತಂದೆ, ವಕೀಲೆ ಟಿಸ್ಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ರಂಜನ್ ರಾವ್ ಯರ್ಡೂರು ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಾಲಯ ದೂರುದಾರರು ನೀಡಿದ ಈ ದೂರು ಆಧಾರ ರಹಿತವಾಗಿದೆ ಎಂದು, ದಾವೆಯನ್ನು ಪ್ರಾಥಮಿಕ ಹಂತದಲ್ಲೇ ವಜಾಗೊಳಿಸಿದೆ. ಶ್ರೀ ಕ್ಷೇತ್ರ…

    Spread the love

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಕಡಿರುದ್ಯಾವರ: ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಮತ್ತು 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಇದರ ವತಿಯಿಂದ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳು…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 4 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    • By admin
    • September 8, 2026
    • 8 views
    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 10 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 7 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 9 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 14 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ