ಮಳಲಿ ಮಸೀದಿಯ ವಿವಾದ: ಮಸೀದಿ ಆಡಳಿತ ಮಂಡಳಿಯ ಅರ್ಜಿ ವಜಾ

ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿರುವ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ((Malali Mosque Row Case) ಪ್ರಕರಣದಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

ಮಳಲಿ ಮಸೀದಿಯ ಅರ್ಜಿ ವಿಚಾರಣೆ ಸಿವಿಲ್ ಕೋರ್ಟ್​ (Civil Court) ವ್ಯಾಪ್ತಿಯಲ್ಲಿಯೇ ನಡೆಯಲಿದೆ. ಮಸೀದಿ ಕಾಮಗಾರಿ ತಡೆಯಾಜ್ಞೆ ಕೋರಿ ಮತ್ತು ಅದರ ಸಮೀಕ್ಷೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (Vishwa hindu parishat) ಅರ್ಜಿ ಸಲ್ಲಿಸಿತ್ತು. ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ತೀರ್ಪು ಇದಾಗಿದೆ.ಮಳಲಿ ಮಸೀದಿ ನವೀಕರಣದ ವೇಳೆ ಹಿಂದೂ ದೇವಾಲಯ ಶೈಲಿಯ ಪಾರಂಪರಿಕ ಕಟ್ಟಡ ಪತ್ತೆಯಾಗಿತ್ತು. ಆ ಬಳಿಕ ಹಿಂದೂ ಸಂಘಟನೆಗಳು ಮಳಲಿ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟಿತ್ತು. ಈ ತಾಂಬೂಲ ಪ್ರಶ್ನೆಯಲ್ಲಿ ಆ ಜಾಗದಲ್ಲಿ ಹಿಂದೆ ಶಿವನಿಗೆ ಸಂಬಂಧಿಸಿದ ಗುರು ಪೀಠವಿತ್ತು ಎಂಬ ಅಂಶ ಉಲ್ಲೇಖವಾಗಿತ್ತು.

READ ALSO

ಈ ಹಿನ್ನೆಲೆಯಲ್ಲಿ ಮಸೀದಿ ಇರುವ ಸ್ಥಳದ ಬಗ್ಗೆ ವಿಹೆಚ್​ಪಿ ಸರ್ವೇಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿತ್ತು. ಅಲ್ಲದೇ ಮಸೀದಿ ನವೀಕರಣಕ್ಕೆ ತಡೆಕೋರಿಯೂ ವಿಹೆಚ್​​ಪಿ ಅರ್ಜಿ ಹಾಕಿತ್ತು. ಆದರೆ ಈ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರಲಿದೆ ಎಂದು ಮಸೀದಿ ಆಡಳಿತ ಮಂಡಳಿ ಪರ ವಕೀಲರು ವಾದಿಸಿದ್ದರು. ಈ ಪ್ರಕರಣ ವಕ್ಫ್ ಟ್ರಿಬ್ಯುನಲ್​​ನಲ್ಲಿ ನಡೆಯಬೇಕೋ ಅಥವಾ ಸಿವಿಲ್ ಕೋರ್ಟ್​ನಲ್ಲಿ ನಡೆಯಬೇಕೋ ಎಂಬ ಬಗ್ಗೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು ಇಂದು ನ್ಯಾಯಾಲಯವು ವಿಶ್ವಹಿಂದೂ ಪರಿಷತ್ ನ ಅರ್ಜಿ ಸ್ವೀಕರಿಸಿರುವುದಾಗಿ ತಿಳಿಸಿದೆ. ಇದೆ ವೇಳೆ ಮಸೀದಿ ಕಾಮಗಾರಿಗೆ ನೀಡಿದ ಕಾಮಗಾರಿ ತೆರವು ಮಾಡಬೇಕು ವಿಎಚ್ ಪಿ ಅರ್ಜಿ ವಜಾ ಗೊಳಿಸಬೇಕೆಂದು ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ . ಅಲ್ಲದೇ ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲೇ ಮಳಲಿ ಮಸೀದಿಯ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ವಿಎಚ್ ಪಿ ಅರ್ಜಿ ಸ್ವೀಕರಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ. ಮಳಲಿ ಮಸೀದಿಯಲ್ಲಿ ಪತ್ತೆಯಾಗಿರುವ ದೇವಾಲಯದ ರಚನೆ ಬಗ್ಗೆ ಮೊದಲು ಪರಿಶೀಲನೆಯಾಗಬೇಕು. ಅದರ ವಸ್ತುಸ್ಥಿತಿ ಪರಿಶೀಲಿಸಲು ಕೋರ್ಟ್‌ ಕಮಿಷನರ್‌ ಒಬ್ಬರನ್ನು ನೇಮಿಸಬೇಕು. ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಕಮಿಷನರ್‌ ನೇಮಕ ಮಾಡುವ ಕುರಿತು ಪರಿಗಣಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿತ್ತು.