ಮಂಗಳೂರು: ಮಂಗಳೂರು – ಮಂತ್ರಾಲಯ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸಂಚಾರವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿದರು.
ಇದೇ ವೇಳೆ ಪ್ರಯಾಣಿಕರಿಗೆ ಶುಭ ಹಾರೈಸಿದ ಅವರು ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮಂಗಳೂರಿನಿಂದ ನೂತನ ಮಾದರಿಯ ಹವಾನಿಯಂತ್ರಿತ ಮಲ್ಟಿ ಆಕ್ಸೆಲ್ ವೋಲ್ವೋ ವಾಹನ, ಹೊಸ ಮಾದರಿಯ ನಾನ್ ಎಸಿ ಸ್ಲೀಪರ್ ಹಾಗೂ ಸುಖಾಸೀನ ವ್ಯವಸ್ಥೆಯ ರಾಜಹಂಸ ಬಸ್ ಗಳು ಪ್ರಯಾಣಿಸಲಿವೆ.