ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

ಬೆಂಗಳೂರು: ಮಾರಣಾಂತಿಕ ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಮೃತ ಯುವಕನ ಟ್ರಾವೆಲ್ ಹಿಸ್ಟ್ರಿ ಬೆಚ್ಚಿ ಬೀಳಿಸುವಂತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೂ ಆತಂಕ ಎದುರಾಗಿದೆ.ಕೇರಳದ ಮಲಪ್ಪುರಂ ಮೂಲದ 23 ವರ್ಷದ ವಿದ್ಯಾರ್ಥಿ ನಿಫಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ.

ಕಾಲಿಗೆ ಪೆಟ್ಟುಬಿದ್ದ ಕಾರಣ ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ವಿದ್ಯಾರ್ಥಿ, ಸೆ.5ರಂದು ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ವೇಳೆ ಯುವಕನಿಗೆ ನಿಫಾ ವೈರಸ್ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸೆ.8ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.

ಯುವಕನ ಅಂತ್ಯಕ್ರಿಯಲ್ಲಿ ಬೆಂಗಳೂರಿನ ಆತನ ಸ್ನೇಹಿತರು 15 ಜನ ವಿದ್ಯಾರ್ಥಿಗಳು ಸೇರಿದಂತೆ 115 ಜನರು ಭಾಗಿಯಾಗಿದ್ದರು. ಬೆಂಗಳೂರಿನ 15 ವಿದ್ಯಾರ್ಥಿಗಳು ಮೃತ ಯುವಕನ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಮೃತ ಯುವಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರನ್ನು ಐಸೋಲೇಷನ್ ಮಾಡಿದ್ದು, ಬೆಂಗಳೂರಿನ 15 ವಿದ್ಯಾರ್ಥಿಗಳನ್ನು ಕೂಡ ಐಸೊಲೇಷನ್ ಗೆ ಒಳಪಡಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

Spread the love
  • Related Posts

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ, ಪಶ್ಚಿಮ ಘಟ್ಟದ ಹಚ್ಚ ಹಸಿರಿನ ತಪ್ಪಲಿನಲ್ಲಿ ಹಾಗೂ ನೇತ್ರಾವತಿ ನದಿಯ ಉಗಮ ಪ್ರದೇಶದ ಸಮೀಪದಲ್ಲಿರುವ ನೇತ್ರಾವತಿ ಹೋಂ ಸ್ಟೇ ಪ್ರಕೃತಿ ಪ್ರಿಯರು, ಚಾರಣಿಗರು ಹಾಗೂ ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವವರಿಗೆ…

    Spread the love

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    🙏 ಪುಟ್ಟ ಶಿವಾನಿಯ ಚಿಕಿತ್ಸೆಗೆ ನೆರವಾಗಿ ನಿಮ್ಮ ಸಣ್ಣ ಸಹಾಯವೂ ಒಂದು ಜೀವ ಉಳಿಸಬಹುದು. “ಸಹಾಯಹಸ್ತ ನೀಡಲು ಇಲ್ಲಿ ಕ್ಲಿಕ್ ಮಾಡಿ” ❤️ DONATE NOW SHIVANI upi://pay?pa=107044785044457@cnrb&pn=PADMARAJA&mc=5198&tr=1234567887654321&am=0&mam=0&cu=INR ಬೆಳ್ತಂಗಡಿ, ಆ. 9: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿಗಳಾದ ಪದ್ಮರಾಜ್…

    Spread the love

    You Missed

    ವೈದ್ಯಕೀಯ ವಿದ್ಯಾರ್ಥಿಗಳ ಕನಸು ನನಸಾಗಿಸುವ ‘ಎಕ್ಸೆಲ್ ನೀಟ್ ಅಕಾಡೆಮಿ’ ವೈದ್ಯರಾಗಲು ವಿಶ್ವಾಸದ ಆಯ್ಕೆ – ಎಕ್ಸೆಲ್ ಗುರುವಾಯನಕೆರೆ

    • By admin
    • August 11, 2026
    • 6 views
    ವೈದ್ಯಕೀಯ ವಿದ್ಯಾರ್ಥಿಗಳ ಕನಸು ನನಸಾಗಿಸುವ ‘ಎಕ್ಸೆಲ್ ನೀಟ್ ಅಕಾಡೆಮಿ’ ವೈದ್ಯರಾಗಲು ವಿಶ್ವಾಸದ ಆಯ್ಕೆ – ಎಕ್ಸೆಲ್  ಗುರುವಾಯನಕೆರೆ

    ಪುತ್ತೂರು: ರಸ್ತೆ ಕಾಮಗಾರಿ ನಡುವೆ ಮಣ್ಣಿನಲ್ಲಿ ಹೂತು ಹೋದ ಕೆ.ಎಸ್‌.ಆರ್‌.ಟಿ.ಸಿ ಸ್ಲೀಪರ್ ಕೋಚ್ ಬಸ್; ರಸ್ತೆ ಸುರಕ್ಷತಾ ಕ್ರಮಗಳ ಕೊರತೆಗೆ ಸ್ಥಳೀಯರ ಆಕ್ರೋಶ!

    • By admin
    • August 11, 2026
    • 3 views
    ಪುತ್ತೂರು: ರಸ್ತೆ ಕಾಮಗಾರಿ ನಡುವೆ ಮಣ್ಣಿನಲ್ಲಿ ಹೂತು ಹೋದ ಕೆ.ಎಸ್‌.ಆರ್‌.ಟಿ.ಸಿ ಸ್ಲೀಪರ್ ಕೋಚ್ ಬಸ್; ರಸ್ತೆ ಸುರಕ್ಷತಾ ಕ್ರಮಗಳ ಕೊರತೆಗೆ ಸ್ಥಳೀಯರ ಆಕ್ರೋಶ!

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    • By admin
    • August 10, 2026
    • 5 views
    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    • By admin
    • August 10, 2026
    • 8 views
    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    • By admin
    • August 9, 2026
    • 8 views

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    • By admin
    • August 8, 2026
    • 12 views
    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ