ಇನ್ಮುಂದೆ ಪೋಲಿಸ್ ಅಧಿಕಾರಿಗಳು ಲಂಚ ಕೇಳಿದಲ್ಲಿ ವಾಟ್ಸಾಪ್ ನಲ್ಲೆ ದೂರು ದಾಖಲಿಸಬಹುದು

READ ALSO

ಬೆಂಗಳೂರು: ಅಪರಾಧಿಗಳಿಗೆ ನೆರವು ನೀಡುವ ಅಥವಾ ಸುಳ್ಳು ಕೇಸ್‌ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವ ಪೊಲೀಸರ ವಿರುದ್ಧ ಈಗ ನೇರವಾಗಿ ಬೆಂಗಳೂರು ಪೊಲಿಸ್​ ಕಮಿಷನರ್ ಅವರಿಗೇ ಮೊಬೈಲ್​ನಲ್ಲಿ ವಾಟ್ಸಾಪ್​ ಮೂಲಕ ಕಂಪ್ಲೇಂಟ್ ಕೊಡಬಹುದು. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ನೀವು 9480801000 ನಂಬರ್ ಮೂಲಕ ವಾಟ್ಸಾಪ್ ಮಾಡಿ ದೂರು ಕೊಡಬಹುದು.