ಶಿಡ್ಲಘಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊರೋನಾ ಬಗ್ಗೆ ಜಾಗೃತಿಗಾಗಿ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸರಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ರವರು ಕೊರೋನಾ ಸಾಮಾನ್ಯವಾದ ರೋಗ ಇದಕ್ಕೆ ಯಾರು ಭಯಪಡಬೇಕಾಗಿಲ್ಲ ಬದಲಾಗಿ ಜಾಗೃತರಾಗಿರಬೇಕು, ಸ್ವಲ್ಪ ಎಚ್ಚರಿಕೆಯಿಂದ ಜೀವನ ಶೈಲಿಯನ್ನು ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಸ್ವಚ್ಫತೆಯನ್ನು ಕಾಪಾಡಿಕೊಂಡಲ್ಲಿ ಇದು ಮನುಷ್ಯನಿಗೆ ಮಾರಣಾಂತಿಕವಲ್ಲ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಡಾ.ಡಿ.ವೀರೇಂದ್ರಹೆಗ್ಗಡೆಯವರು ಮತ್ತು ಹೇಮಾವತಿ.ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕದ ಮೂಲಕ ಜನರಲ್ಲಿ ಕೊರೋನಾದ ಬಗ್ಗೆ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇದರ ತಿಳುವಳಿಕೆಯನ್ನು ತಾವೆಲ್ಲರೂ ಪಡೆದುಕೊಂಡು ಜಾಗೃತರಾಗಿ ಆರೋಗ್ಯವಂತ ಜೀವನವನ್ನು ಸಾಗಿಸಿ ಎಂದು ಶುಭ ಹಾರೈಸಿದರು.

READ ALSO

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ್ಯಾಗರಾಜ್ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮಾವತಿ ಸೇವಾಪ್ರತಿನಿಧಿ ಲಕ್ಷ್ಮೀ ಮತ್ತು ಬೀದಿ ನಾಟಕ ಪ್ರದರ್ಶಿಸಿದ “ಬೇರು ಬೆವರು” ತಂಡದ ರಾಜ್ಯ ಮಟ್ಟದ ಕಲಾವಿದರಾದ ಚಂದ್ರಶೇಖರ್ ಮಹೇಶ್ ಕುಮಾರ್ ಹರೀಶ್ ಮತ್ತು ಸುಮ ರವರು ಉಪಸ್ಥಿತರಿದ್ದರು.