ಬ್ರೈನ್ ಟ್ಯೂಮರ್ ಸಮಸ್ಯೆ ಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತುರ್ತು ಆರ್ಥಿಕ ನೆರವು

ಶಿಡ್ಲಘಟ್ಟ: ಬ್ರೈನ್ ಟ್ಯೂಮರ್ ಸಮಸ್ಯೆ ಯಿಂದಾಗಿ ಸೊಂಟದ ಸ್ವಾದೀನತೆಯನ್ನು ಕಳೆದುಕೊಂಡಿರುವ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ 12 ವರ್ಷದ ಬಾಲಕ ಯಶಸ್ ಸಿದ್ದಾರ್ಥ್ ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 30ಸಾವಿರ ಸಹಾಯಧನ ಮಂಜೂರುಗೊಳಿಸಿದ್ದಾರೆ.

ಸದಾ ಸೇವಾ ಚಟುವಟಿಕೆಗಳೊಂದಿಗೆ ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಸಹಾಯಧನ ಮಾಡುವ ಮೂಲಕ ಲಾಕ್ ಡೌನ್ ಸಮಯದಲ್ಲೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಂಸ್ಥೆಯಾಗಿ ರಾಜ್ಯಕ್ಕೆ ಮಾದರಿಯಾಗಿದೆ.

READ ALSO

ಶ್ರೀ ಕ್ಷೇತ್ರದಿಂದ ಮಂಜೂರಾದ 30ಸಾವಿರ ಸಹಾಯಧನ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಬಂಧಕರಾದ ಪ್ರಕಾಶ್ ರವರು ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ದೇವರಾಜ್ ಮೇಲೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್, ಪತ್ರಕರ್ತರಾದ ಮಿಥುನ್, ವೀರಾಪುರ ಮಂಜು, ನಾಗರಾಜ್, ಮೇಲ್ವಿಚಾರಕರಾದ ಜ್ಯೋತಿ ಸೇವಾಪ್ರತಿನಿಧಿ ಪದ್ಮಾ ಉಪಸ್ಥಿತರಿದ್ದರು.