ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕಡ್ಡಾಯವಾಗಿ ಬೆಳಗ್ಗೆ 6 ರಿಂದ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯುವಂತೆ ಸೂಚನೆ

READ ALSO

ಮಂಗಳೂರು: ಕೋವಿಡ್ 19 ಮಿತಿಮೀರಿ ಹಬ್ಬುತ್ತಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ 10ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು ಕೆಲವೆಡೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅಂಗಡಿ ತೆರೆಯುತ್ತಿದ್ದು ಹೀಗೆ ಮಾಡುವುದರಿಂದ ಗ್ರಾಹಕರಿಗೆ ಖರೀದಿಸಲು ಸಮಯದ ಕೊರತೆಯುಂಟ್ಟಾಗಿ ಜನಸಂದಣಿಯಾಗುವ ಸಂಭವವಿರುತ್ತದೆ. ಅದ್ದರಿಂದ ಕಡ್ಡಾಯವಾಗಿ ಬೆಳಗ್ಗೆ 6 ರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ಮುಂಗಟ್ಟುಗಳನ್ನು ಈ ಸಮಯಕ್ಕೆ ಸರಿಯಾಗಿ ತೆರೆದು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ದ.ಕ ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಸೂಚಿಸಿದ್ದಾರೆ.