ಕೈಲಾಸದಲ್ಲಿ ನಿತ್ಯಾನಂದನ ರಿಸರ್ವ್ ಬ್ಯಾಂಕ್! ಕೈಲಾಸದ ಕರೆನ್ಸಿ ಹೇಗಿದೆ ನೋಡೋಣ ಬನ್ನಿ!

ನವದೆಹಲಿ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಗಣೇಶ ಚತುರ್ಥಿ ದಿನದಂದೇ ದೂರದ ಈಕ್ವೆಡಾರ್​ ದೇಶದ ಕರಾವಳಿಯ ಸಣ್ಣ ದ್ವೀಪದಲ್ಲಿ ಕೈಲಾಸ ದೇಶದ ರಿಸರ್ವ ಬ್ಯಾಂಕ್​ ಕೈಲಾಸ ಆರಂಭಿಸಿದ್ದಾನೆ.


ಈತನ ಕೈಲಾಸ ದೇಶ ನಿಖರವಾಗಿ ಎಲ್ಲಿದೆ ಎಂಬುದನ್ನು ಈವರೆಗೂ ನಿತ್ಯಾನಂದ ತಿಳಿಸಿಲ್ಲವಾದರೂ, ಹಲವು ಮಾಧ್ಯಮಗಳಲ್ಲಿ ಇದು ಈಕ್ವೆಡಾರ್​ನಲ್ಲಿರುವ ಒಂದು ದ್ವೀಪ ಎಂದೇ ಗುರುತಿಸಲಾಗಿದೆ. ಇದನ್ನು ನಿತ್ಯಾನಂದ ಖರೀದಿಸಿದ್ದಾನೆ ಎಂದೇ ಹೇಳಲಾಗಿದೆ.

READ ALSO

ಕೈಲಾಸ ದೇಶದ ಪ್ರಧಾನಮಂತ್ರಿಯೂ ಆಗಿರುವ ನಿತ್ಯಾನಂದ, ತನ್ನ ಬೆಂಬಲಿಗರೊಂದಿಗೆ ಬ್ಯಾಂಕ್​ ಕಾರ್ಯಾರಂಭಕ್ಕೆ ಚಾಲನೆ ನೀಡಿದ್ದಾನೆ. ಈತ ದೇಶ ತೊರೆದಿದ್ದಾನೆಂದು ಹೇಳಲಾದ ಕಳೆದ ನವೆಂಬರ್​ ನಲ್ಲಿ ಈ ರಾಷ್ಟ್ರ ಉದಯವಾಗಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದ. ಜತೆಗೆ ಈ ದೇಶದ ಪ್ರಜೆಗಳಿಗೆಂದೇ ಈ ಪಾಸ್​ಪೋರ್ಟ್​ ಆರಂಭಿಸಿದ್ದ.

ಕೈಲಾಸವೊಂದು ರಾಜ್ಯಗಳಿಲ್ಲದ ದೇಶ, ಜತೆಗೆ ಹೊಸ ಭೂಭಾಗವನ್ನು ಬಯಸುವುದಿಲ್ಲ ಎಂಬುದು ನಿತ್ಯಾನಂದನ ವ್ಯಾಖ್ಯಾನ. ತಾವಿರುವ ನೆಲದಲ್ಲಿ ಹಿಂದೂ ಧರ್ಮವನ್ನು ಪಾಲಿಸಲಾಗದ ಜನರಿಂದ ಈ ಕೈಲಾಸ ಸೃಷ್ಟಿಯಾಗಿದೆ ಎಂದು ಕೈಲಾಸ ವೆಬ್​ಸೈಟ್​ನಲ್ಲಿ ಹೇಳಿಕೊಳ್ಳಲಾಗಿದೆ.

ಕೈಲಾಸದಲ್ಲಿ ಆಚರಿಸಲ್ಪಡುತ್ತಿರುವ ಗಣೇಶ ಚತುರ್ಥಿ ಸಂದರ್ಭದಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಕೈಲಾಸದ ಕರೆನ್ಸಿಯನ್ನು ಗಣಪತಿ, ಪರಮಶಿವ ಹಾಗೂ ಗುರು ನಿತ್ಯಾನಂದ ಸ್ವಾಮೀಜಿ ಪದತಲಕ್ಕೆ ಅರ್ಪಿಸಲಾಗಿದೆ ಎಂದು ಘೋಷಿಸಲಾಗಿದೆ.

ಅಷ್ಟಕ್ಕೂ ಇಲ್ಲಿನ ಕರೆನ್ಸಿ ಕೈಲಾಸಿಯನ್​ ಡಾಲರ್​. ಜತೆಗೆ, ಇತರ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯವೆಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಡಾಲರ್​ ಎಂದ ಮೇಲೆ ಅಮೆರಿಕನ್​ ಡಾಲರ್​ ಮೌಲ್ಯವೇ ಹೊಂದಿರಬಹದು ಎಂದು ಅಂದಾಜಿಸಲಾಗುತ್ತಿದೆ. ಭಾರತೀಯ ರೂ. ವಿನಿಮಯ ದರ ಅಂದಾಜು 75 ರ.ಗಳಿಬಹುದೆಂದು ಅಂದಾಜಿಸಲಾಗುತ್ತಿದೆ.

ಕೈಲಾಸ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿರುವ ದೇಶಗಳಲ್ಲಿ ಮಾತ್ರ ಈ ಕರೆನ್ಸಿ ಚಲಾವಣೆಯಲ್ಲಿ ಇರಲಿದೆಯಂತೆ. ಹಿಂದು ಧಾರ್ಮಿಕ ನೀತಿಗಳ 100ಕ್ಕೂ ಅಧಿಕ ಪುಸ್ತಕಗಳು 360ಕ್ಕೂ ಅಧಿಕ ಲೇಖನಗಳನ್ನು ಅಧ್ಯಯನ ಮಾಡಿ ಈ ಕರೆನ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ರಿಸರ್ವ್​ ಬ್ಯಾಂಕ್​ ಆರಂಭಿಸಲು ದೇಶವೊಂದರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ರಿಸರ್ವ್​ ಬ್ಯಾಂಕ್​ ಆಫ್​ ಕೈಲಾಸ ಕಾನೂನು ಬದ್ಧವಾಗಿದೆ ಎಂದು ಕೈಲಾಸ ವೆಬ್​ಸೈಟ್​ನಲ್ಲಿ ಹೇಳಿಕೊಳ್ಳಲಾಗಿದೆ.