ಮಂಗಳೂರಿನಲ್ಲಿ ಬಾಲಕರ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ!

ಮಂಗಳೂರು : ಮೂರು ದಿನಗಳ ಹಿಂದೆ ನಗರದ ಕೊಂಚಾಡಿ ದೇವಸ್ಥಾನ ಸಮೀಪ ಬಾಲಕರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೆಲ್‌ನ ಅಲಿಸ್ಟರ್ ತಾವ್ರೋ (21), ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳು.

ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ ಪ್ರಾಂಗಣ ದಾಟಿ ಎದುರು ರಸ್ತೆಯಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ರಸ್ತೆ ಬದಿ ನಿಂತಿದ್ದರು. ಆ ಪೈಕಿ ಓರ್ವ ಎದುರಿನಲ್ಲಿ ಹೋಗುತ್ತಿದ್ದ ಬಾಲಕನಿಗೆ ಗೋಣಿ ಚೀಲ ಮುಸುಕು ಹಾಕಲು ಯತ್ನಿಸಿದ್ದಾನೆ. ಬಾಲಕ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದನು. ಬಳಿಕ ದುಷ್ಕರ್ಮಿಯು ಕೂಡಲೇ ಇನ್ನೊಬ್ಬ ಬಾಲಕನಿಗೆ ಮುಸುಕು ಹಾಕಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಹಿಂದಿನಿಂದ ಬರುತ್ತಿದ್ದ ಮತ್ತೋರ್ವ ಬಾಲಕ ಅಪಹರಣಕಾರರತ್ತ ಕಲ್ಲು ಹೆಕ್ಕಿ ಎಸೆದ್ದಾನೆ. ಅಷ್ಟರಲ್ಲಿ ಅಪಾಯ ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದರು.

Spread the love
  • Related Posts

    ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸಹಿತ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು

    ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ED ಮೂವರು ಪ್ರಮುಖ ಆರೋಪಿಗಳನ್ನು ಬಂಧನ ಮಾಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್‌ ಖಂಡೇವಾಲ ಹಾಗೂ ಸುನೀಶ್‌ ಹೆಗ್ಡೆಯನ್ನು ಬಂಧನ ಮಾಡಲಾಗಿದ್ದು,…

    Spread the love

    ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ನಾಗರ ಹಾವುಗಳು

    ಬೆಳ್ತಂಗಡಿ: ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಎಂಬವರು ಕಕ್ಕಿಂಜೆಯ ಉರಗಮಿತ್ರ,…

    Spread the love

    You Missed

    ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸಹಿತ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು

    • By admin
    • May 9, 2026
    • 25 views
    ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸಹಿತ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು

    ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ನಾಗರ ಹಾವುಗಳು

    • By admin
    • May 8, 2026
    • 111 views
    ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ನಾಗರ ಹಾವುಗಳು

    ಮೌಲ್ಯ ಕಳೆದುಕೊಂಡ ಮೌಲ್ಯಮಾಪನ! ವಿದ್ಯಾರ್ಥಿಗಳ ಖಿನ್ನತೆಗೆ ಇದೇ ಕಾರಣ, ಶಿಕ್ಷಣ ಸಚಿವರೇ ಈ ವ್ಯವಸ್ಥೆ ಯಾರಿಗಾಗಿ, ಯಾತಕ್ಕಾಗಿ?

    • By admin
    • May 7, 2026
    • 114 views
    ಮೌಲ್ಯ ಕಳೆದುಕೊಂಡ ಮೌಲ್ಯಮಾಪನ! ವಿದ್ಯಾರ್ಥಿಗಳ ಖಿನ್ನತೆಗೆ ಇದೇ ಕಾರಣ, ಶಿಕ್ಷಣ ಸಚಿವರೇ ಈ ವ್ಯವಸ್ಥೆ ಯಾರಿಗಾಗಿ, ಯಾತಕ್ಕಾಗಿ?

    ಬೆಳ್ತಂಗಡಿ: ಎಸ್ಐಟಿ ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣವರ್, ಹಳೇಯ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ ತಂಡ!!!

    • By admin
    • May 7, 2026
    • 45 views
    ಬೆಳ್ತಂಗಡಿ: ಎಸ್ಐಟಿ ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣವರ್, ಹಳೇಯ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ ತಂಡ!!!

    ಕೊರೊನಾ ನೆನಪು ಮಾಸುವ ಮುನ್ನವೇ ‘ಹಂಟಾವೈರಸ್’ ಆತಂಕ: ಸ್ವಿಜರ್ಲೆಂಡ್‌ನಲ್ಲಿ ಮೊದಲ ಪ್ರಕರಣ ಪತ್ತೆ!!

    • By admin
    • May 7, 2026
    • 40 views
    ಕೊರೊನಾ ನೆನಪು ಮಾಸುವ ಮುನ್ನವೇ ‘ಹಂಟಾವೈರಸ್’ ಆತಂಕ: ಸ್ವಿಜರ್ಲೆಂಡ್‌ನಲ್ಲಿ ಮೊದಲ ಪ್ರಕರಣ ಪತ್ತೆ!!

    ಮುಂಡಾಜೆ ಹೆದ್ದಾರಿ ಬದಿ ಕಳಪೆ ತಗಡು ಶೀಟಿನ ತಂಗುದಾಣ: ಸಾರ್ವಜನಿಕರ ಆಕ್ರೋಶ

    • By admin
    • May 7, 2026
    • 101 views
    ಮುಂಡಾಜೆ ಹೆದ್ದಾರಿ ಬದಿ ಕಳಪೆ ತಗಡು ಶೀಟಿನ ತಂಗುದಾಣ: ಸಾರ್ವಜನಿಕರ ಆಕ್ರೋಶ