ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೋ ಸಂಚಾರಕ್ಕೆ ನಾಳೆ ಸಿಎಂ ಬಿಎಸ್​ವೈ ರಿಂದ ಹಸಿರು ನಿಶಾನೆ!

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಮೊದಲ ವಿಸ್ತಾರಿತ ಮಾರ್ಗವಾದ ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೋ ಸಂಚಾರಕ್ಕೆ ಸಿಎಂ ಬಿಎಸ್​ವೈ ಹಸಿರು ನಿಶಾನೆ ತೋರಿಸಲಿದ್ದಾರೆ. ಇದೇ ತಿಂಗಳು 15ರಿಂದ ರೀಚ್-4 ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ.

ಸಂಕ್ರಾಂತಿ ಹಬ್ಬದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್​ಸಿಂಗ್​ ಪುರಿ ನಾಳೆ ಸಂಜೆ 4.30ಕ್ಕೆ ಕೋಣನಕುಂಟೆ ಕ್ರಾಸ್​ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ನಮ್ಮ ಮೆಟ್ರೋ ಎರಡನೇ ಹಂತದ ಮೊದಲ ವಿಸ್ತಾರಿತ ಮಾರ್ಗವಾದ ಯಲಚೇನಹಳ್ಳಿ-ಅಂಜನಾಪುರ ನಡುವೆ 6.29 ಕಿ.ಮೀ. ಮಾರ್ಗ ಇದಾಗಿದೆ. ಇದು ಹಸಿರು ಮಾರ್ಗದ ವಿಸ್ತಾರಣಾ ಮಾರ್ಗವಾಗಿದ್ದು, ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಯಲಚೇನಹಳ್ಳಿ-ಅಂಜನಾಪುರ ನಡುವೆ ಕೋಣನಕುಂಟೆ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್​​ಶಿಪ್ ಎಂಬ ಐದು ಎಲಿವೇಟೆಟ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ 75 ಸಾವಿರ ಮಂದಿ ಓಡಾಟ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​​​ ನಿರೀಕ್ಷಿಸಿದೆ.

Spread the love
  • Related Posts

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಬೆಳ್ತಂಗಡಿ:ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಬೆಳ್ತಂಗಡಿ ತಾಲೂಕನ್ನು ಮಾದಕ ವಸ್ತು ಮುಕ್ತಗೊಳಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. “ನಶೆ ಬೇಡ… ನಾಳೆಯ ಭವಿಷ್ಯ ಬೇಕು” ಹಾಗೂ…

    Spread the love

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ರಾತ್ರಿ ಮತ್ತೆ ದೈತ್ಯ ಗಾತ್ರದ ಕಾಡಾನೆ ಕಂಡುಬಂದಿದೆ. ಘಾಟಿ ಭಾಗದಲ್ಲಿ ಆಗಾಗ ಕಾಣಸಿಗುವ ಈ ಕಾಡಾನೆ ರಸ್ತೆ ಬದಿ ನಿಂತಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದು ಕಾಡಾನೆಯನ್ನು ಕಾಡಿಗಟ್ಟುವ…

    Spread the love

    You Missed

    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    • By admin
    • August 10, 2026
    • 3 views
    ಬೆಳ್ತಂಗಡಿ: ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನಕ್ಕೆ ಯುವ ಕಾಂಗ್ರೆಸ್ ಚಾಲನೆ

    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    • By admin
    • August 10, 2026
    • 5 views
    ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಏಕದಂತ

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    • By admin
    • August 9, 2026
    • 6 views

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    • By admin
    • August 8, 2026
    • 11 views
    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    • By admin
    • August 8, 2026
    • 7 views
    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    • By admin
    • August 7, 2026
    • 10 views
    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ