ಮುಲ್ಕಿ: ಬಾವಿಗೆ ಹಾರಿ ಗಣೇಶ ವಿಸರ್ಜನೆ ಮಾಡಬಹುದೆಂಬ ವಾಕ್ಯದೊಂದಿಗೆ ವ್ಯಕ್ತಿಯೊಬ್ಬ ಗಣೇಶನ ವಿಗ್ರಹದೊಂದಿಗೆ ಬಾವಿಗೆ ಹಾರುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಾವಿಗೆ ಹಾರುತ್ತಿರುವ ದೃಶ್ಯ ಕಂಡು ನೋಡುವವರಿಗೆ ಮನರಂಜನೆಯಾಗಿದೆ.
ವ್ಯಕ್ತಿ ಬಾವಿಗೆ ಹಾರಿ ಸುಮಾರು ಹೊತ್ತಾದರೂ ಮೇಲೆ ಬರುವುದು ಕಾಣುತ್ತಿಲ್ಲ. ಬಾವಿಯ ಆಳದವರೆಗೆ ನೀರಿನಲ್ಲಿ ಹೋಗಿ, ಗಣೇಶ ವಿಗ್ರಹವನ್ನು ನೀರಿನಲ್ಲಿ ಬಿಟ್ಟು ಬರುತ್ತಿರುವ ದೃಶ್ಯ ಕಂಡು ಭಯ ಭಕ್ತಿಯ ಜೊತೆಗೆ ಆತಂಕವನ್ನು, ಹುಟ್ಟಿಸುತ್ತದೆ.