ಅರಣ್ಯ ಇಲಾಖೆ ಮೌನಕ್ಕೆ ಕೃಷಿಕನ ಮೇಲೆರಗಿದ ಚಿರತೆ ಇನ್ನಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳುವರೇ‼️‼️
ಬೆಳ್ತಂಗಡಿ : ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಎಂಬವವರು ಜ.16 ರಂದು ಬೆಳಿಗ್ಗೆ 8:15 ಗಂಟೆಗೆ ಮನೆಯ ಅಂಗಳದಲ್ಲಿರುವ ವೇಳೆ ಏಕಾಏಕಿ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಸಂಭವಿಸಿದೆ. ಚಿರತೆ ದಾಳಿಯ ವೇಳೆ ತಕ್ಷಣ ಜೀವರಕ್ಷಣೆಗಾಗಿ…
ಕಡಿರುದ್ಯಾವರ, ಮುಂಡಾಜೆ ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಅರಣ್ಯ ಇಲಾಖೆ ಮೌನ‼️‼️‼️
ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಕಡಿರುದ್ಯಾವರ ಗ್ರಾಮದ ಕಾನರ್ಪ, ನೂಜಿ ಪರಿಸರದಲ್ಲಿಯೂ ನಾಲ್ಕು ಮರಿಗಳ ಜೊತೆ ಚಿರತೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಅರಣ್ಯ ಇಲಾಖೆ ಮೌನ: ಕಳೆದ ಒಂದು ವಾರದಿಂದ ನಿರಂತರವಾಗಿ ಚಿರತೆಗಳು ಮುಂಡಾಜೆ…
ವೇಣೂರು ಅರಣ್ಯ ವಲಯದ ಪಿಲಾತಬೆಟ್ಟು ಎಂಬಲ್ಲಿ ಸಂಕಷ್ಟದಲ್ಲಿದ್ದ ಚಿರತೆಯ ರಕ್ಷಣೆ
ಬೆಳ್ತಂಗಡಿ: ವೇಣೂರು ಅರಣ್ಯ ವಲಯದ ಪಿಲಾತಬೆಟ್ಟು ಎಂಬಲ್ಲಿ ತೋಟ ಒಂದರಲ್ಲಿ ಗಿಡಗಂಟಿಗಳ ಪೊದೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿ ಸುರಕ್ಷಿತವಾದ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ವೇಣೂರು ಅರಣ್ಯ ವಲಯದ ಪಿಲಾತಬೆಟ್ಟು ಎಂಬಲ್ಲಿ ಗುರುವಾರ ತೋಟವೊಂದರಲ್ಲಿ ಸುಮಾರು…
ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಹುಟ್ಟೂರ ಸಮ್ಮಾನ
ಕಾನರ್ಪ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ರವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶ್ರೀ ರಾಮಾಂಜನೇಯ ದೇವಸ್ಥಾನ ಆಂಜನೇಯ ಬೆಟ್ಟ ಕಾನರ್ಪ ಕಡಿರುದ್ಯಾವರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಬೆಳ್ತಂಗಡಿ ಪ್ರದೇಶದಲ್ಲಿ, ಎಕ್ಸೆಲ್ ಪ್ರಿ-ಯೂನಿವರ್ಸಿಟಿ…
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ ಕೃಷಿ ಕಾರ್ಮಿಕರಲ್ಲಿ ಮೂಡಿದ ಆತಂಕ
ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಮಚ್ಚಿಮಲೆ ಅನಂತ ಭಟ್ ಅವರ ರಬ್ಬರ್ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಚಿರತೆಯೊಂದು ಕಾಣಿಸಿಕೊಂಡಿದ್ದು ಟ್ಯಾಪಿಂಗ್ ಕೆಲಸದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲಸದವರು ಬೆಳಗ್ಗೆ ತೋಟಕ್ಕೆ ಹೋದಾಗ ಚಿರತೆಗಳು ಕಾಣಿಸಿರುವುದಾಗಿ ತಿಳಿದು ಬಂದಿದೆ. ಅವರು ಅಲ್ಲಿಂದ…
ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ
ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ ಜ. 12 ರಂದು ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿ ಮಕ್ಕಳ ಗ್ರಾಮ ಸಭೆಯ ಮಹತ್ವ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆಗಳು ಸೂಕ್ತ ಪರಿಹಾರದ ಬಗ್ಗೆ…
ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ
Ujire: ಜನವರಿ 11ನೇ ಆದಿತ್ಯವಾರದಂದು ಬೆಲಾಲು ಗುತ್ತು ಮನೆಯಲ್ಲಿ ಇದೇ ಬರುವ 24ನೇ ತಾರೀಕು ಶನಿವಾರದಂದು ನಡೆಯುವ ರಾಜನ್ ದೈವವಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ” ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ…
ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಜನರ ಬಳಿಗೆ ತಾಲೂಕು ಮಟ್ಟದ ಆಡಳಿತ ವಿನೂತನ ಪರಿಕಲ್ಪನೆಯ ಜನಸ್ಪಂದನ ಸಭೆಯ ಫಲಶ್ರುತಿಯಾಗಿ ತಾಲೂಕು ಆಡಳಿತ ಸೌಧದಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಣಾ ಕಾರ್ಯಕ್ರಮ ಜ.10 ರಂದು ನಡೆಯಿತು.ತಾಲೂಕಿನ 48…
ಎಕ್ಸೆಲ್ ಬೆಳಕು ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶೇಷ ಕಾರ್ಯಾಗಾರ
ಗುರುವಾಯನಕೆರೆ: ಎಕ್ಸೆಲ್ ಬೆಳಕು ಫೌಂಡೇಶನ್ ಉಚಿತ ಶಿಕ್ಷಣ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿಯನ್ನು ಇದೇ ಬರುವ 11/01/2026ನೇ ಭಾನುವಾರ ಮಧ್ಯಾಹ್ನ 2ರಿಂದ 4.30ರವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮ್ಮಿತ್ತ ವಿಶೇಷ ಕಾರ್ಯಗಾರವನ್ನು ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾಸಾಗರ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗೆ ದೇಶದ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ ಪ್ರಧಾನ
ನವದೆಹಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗೆ ಸ್ಕಾಚ್ ಗ್ರೂಪ್‌ನ BFSI ವಿಭಾಗದಡಿ ಹಣಕಾಸು ಒಳಗೊಳ್ಳಿಕೆಗಾಗಿ ಸ್ಕಾಚ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು 2026ರ ಜನವರಿ 10ರಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಪ್ರದಾನ ಮಾಡಲಾಯಿತು. ಧರ್ಮಸ್ಥಳ…
















