ಮಳೆಗಾಲದ ಶೀತ – ಕೆಮ್ಮಿಗೆ ಇಲ್ಲಿದೆ ಸಿರಪ್…!
ಒಂದು ಇಂಚು ಹಸಿ ಅರಿಶಿಣ, ಸ್ವಲ್ಪ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು 1 ಲೋಟ ನೀರಿಟ್ಟು ಕುದಿಸಿ. ಜೊತೆಗೆ ಇದರಲ್ಲಿ 3 ರಿಂದ 4 ಲವಂಗವನ್ನು ಹಾಕಿ. 10 ರಿಂದ 12 ಪುದೀನಾ ಎಲೆ, ಕಾಲು ಚಮಚ ಓಂ ಕಾಳನ್ನು ಹಾಕಿ.…
ಮಂಗಳೂರು ಪಂಪ್ ವೆಲ್ ಫ್ಲೈಓವರ್ ಗೆ ‘ವೀರ ಸಾವರ್ಕರ್ ಮೇಲುಸೇತುವೆ’ ಎಂದು ನಾಮಕರಣ!!! ಕೆಲವೇ ಗಂಟೆಯ ವೇಳೆಯಲ್ಲಿ ಬ್ಯಾನರ್ ಮಾಯ!!!
ಮಂಗಳೂರು: ಬೆಂಗಳೂರಿನ ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಂಗಳೂರಿನ ಪಂಪ್ವೆಲ್ ಮೇಲುಸೇತುವೆಗೆ ‘ ವೀರ ಸಾವರ್ಕರ್ ಮೇಲುಸೇತುವೆ ” ಎಂಬ ಹೆಸರಿನ ಬ್ಯಾನರ್ ರನ್ನು ಆಳವಡಿಸಿ ನಾಮಕರಣ…
ಕರಾವಳಿಗೆ ಅಪ್ಪಳಿಸಿದ “ಮಹಾ” ಚಂಡಮಾರುತ! ಕೊರೋನಾರ್ಭಟಕ್ಕೆ ನಲುಗಿ ಹೋದ ಕರುನಾಡು! ಮುಂಗಾರು ಕೊರೋನಾ ಮೃದಂಗಕ್ಕೆ ಉಡುಪಿ,ಕಲಬುರ್ಗಿ ತತ್ತರ!!!
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ‘ಮಹಾ’ ಸ್ಪೋಟವಾಗಿದ್ದು, ಇಂದು ದಾಖಲೆಯತ್ತ ಕೊರೋನ ಮುನ್ನುಗ್ಗಿದ್ದು ಕರಾವಳಿಯ ಉಡುಪಿ ಜಿಲ್ಲೆಯಲ್ಲಿ150 ಜನರಿಗೆ ಸೋಂಕು ಕಾಣಿಸಿಕೊಂಡರೆ ಕಲಬುರ್ಗಿಯಲ್ಲೂ ಶತಕದ ಗುರಿ ತಲುಪಿದ ಮಹಾಮಾರಿ ರಾಜ್ಯದ 17ಜಿಲ್ಲೆಗಳಲ್ಲಿ ತನ್ನ ರುದ್ರನರ್ತನವನ್ನು ಮುಂದುವರಿಸಿದೆ. ಕರ್ನಾಟಕದಲ್ಲಿಂದು 388 ಮಂದಿಗೆ ಸೋಂಕು…
SDM ಕಾಲೇಜುMSW ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ. ಸಿ. ಯವರಿಗೆ PhD ಪದವಿ
ಬೆಳ್ತಂಗಡಿ: ಉಜಿರೆಯ ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ. ಸಿ. ಯವರಿಗೆ ತುಮಕೂರು ವಿಶ್ವವಿದ್ಯಾಲಯವು PhD ಪದವಿಯನ್ನು ನೀಡಿ ಗೌರವಿಸಿದೆ. ಉಜಿರೆ ಎಸ್. ಡಿ. ಎಂ. ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು…
ರಾಜ್ಯದಾದ್ಯಂತ ಶಾಲಾ ಕಛೇರಿಗಳು ಜೂನ್ 05ರಿಂದ ಪುನರಾರಂಭ!
ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನದಂತೆ ಕೇಂದ್ರದ ಮಾರ್ಗಸೂಚಿಯ ಆಧಾರದಲ್ಲಿ ಜುಲೈ 1 ರಿಂದ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಪೋಷಕರ ಅಭಿಪ್ರಾಯ ಸಂಗ್ರಹಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ. 5.6.2020 ರಿಂದಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಅಲ್ಲಿನ…
ಕರಾವಳಿಯ ಕಡಲತಡಿಯಲ್ಲಿ ಆರ್ಭಟಿಸುತ್ತಿದೆ ಕೊರೋನಾ ‘ಮಹಾ’ ಮಾರಿ! ಕೃಷ್ಣನಗರಿಯಲ್ಲಿ ಇಂದು 210ಜನರಲ್ಲಿ ಸೋಂಕು ದೃಢ
ಉಡುಪಿ: ಕರಾವಳಿಯ ಪಾಲಿಗೆ ಇಂದು ಕರಾಳ ಮಂಗಳವಾರವಾಗಿದೆ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 210 ಜನರಿಗೆ ಸೋಂಕು ದೃಢವಾಗುವ ಮೂಲಕ ಕೃಷ್ಣನಗರಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೆಲ ದಿನಗಳ ಹಿಂದೆ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದೆ ಗ್ರೀನ್ ಜೋನ್ ನಲ್ಲಿ…
ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಕೊರೋನಾ ಜಾಗೃತಿ ಮೂಡಿಸಿ,ಮಾಸ್ಕ್ ವಿತರಿಸಿ ಮಾದರಿಯಾದ SDMಕಾಲೇಜು ವಿದ್ಯಾರ್ಥಿನಿ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸವಣಾಲು ಹಾಲು ಉತ್ಪಾದಕರ ಸಂಘದ ಸದಸ್ಯ ಮತ್ತು ಸ್ಥಳೀಯ ವ್ಯಾಪಾರಿ ರವಿಪೂಜಾರಿಯವರ ಮಗಳು ಎಸ್.ಡಿ.ಯಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆಕರ್ಶರವರು ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಮಾಸ್ಕ್ ವಿತರಿಸುವ ಮೂಲಕ ಕೊರೋನ ಜಾಗೃತಿಯನ್ನು ಮೂಡಿಸಿ…
ರಾಜ್ಯಕ್ಕೆ ಅಪ್ಪಳಿಸುತ್ತಾ “ನಿಸರ್ಗ ಚಂಡಮಾರುತ”!! ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ನಿನ್ನೆ ವಾಯುಭಾರ ಕುಸಿತವಾಗಿದ್ದು, ಇವತ್ತು ಗಾಳಿಯ ವೇಗ ಹೆಚ್ಚಾಗಿದೆ. ನಾಳೆ ಬೆಳಗ್ಗೆ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ. ಈ ‘ನಿಸರ್ಗ ಚಂಡಮಾರುತ’ ರಾಜ್ಯದ ಮೇಲೂ ಪ್ರಭಾವ ಬೀರಿ ಬಳಿಕ ಉತ್ತರದ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರದ ಕಡೆ…
ಕೆ.ವಿ.ಕೆ ಯಲ್ಲಿ ಕರ್ತವ್ಯಕ್ಕೆ ಗೈರಾದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಗೊಳಿಸುವಂತೆ ಕೃಷಿ ಸಚಿವರ ಖಡಕ್ ಸೂಚನೆ
ಬೆಂಗಳೂರು: ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯಕ್ಕೆ ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ. ಇಂದು ತುಮಕೂರು ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ತಿಪಟೂರಿನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೃಷಿ…
ಕೃಷ್ಣ ನಗರಿಯಲ್ಲಿ ಮುಂಬೈ ವೈರಸ್ ರಣಕೇಕೆ!! ರಾಜ್ಯದಲ್ಲಿಂದು 187ಸೋಂಕಿತರು ಪತ್ತೆ!
ಬೆಂಗಳೂರು:- ಕೊರೋನಾ ಮಹಾಮಾರಿ ವೈರಸ್ ರಾಜ್ಯಾದ್ಯಂತ16 ಜಿಲ್ಲೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದ್ದು ಕೃಷ್ಣ ನಗರಿ ಉಡುಪಿಯಲ್ಲಿಂದು ಕಿಲ್ಲರ್ ಕೊರೋನಾದ ಹಾವಳಿಯಿಂದ ಕರಾವಳಿ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಉಡುಪಿಯಲ್ಲಿಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ, ದಕ್ಷಿಣ ಕನ್ನಡದಲ್ಲಿ…
















