ಪಬ್ ಜೀ ಆಟದಲ್ಲಿ ಗೆದ್ದವ ಜೀವನದ ಆಟದಲ್ಲಿ ಗೆಲ್ಲಲಿಲ್ಲ! 13ವರ್ಷದ ಬಾಲಕನ ಕೊಲೆಗೆ ಪಬ್ ಜೀ ಜತೆಗಾರನೇ ಕಾರಣನಾದನೇ! ಮಕ್ಕಳ ಕೈಯಲ್ಲಿ ಮೊಬೈಲ್ ಎಂಬ ಮಾಯಾಂಗನೇಯನ್ನು ಕೊಡುವ ಪೋಷಕರು ತಪ್ಪದೇ ಓದಿ
ಉಳ್ಳಾಲ: ನಾಪತ್ತೆಯಾಗಿದ್ದ 13 ವರ್ಷದ ಬಾಲಕನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ಮೃತದೇಹವು ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡು ಬಳಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಕೆ.ಸಿ ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಹಕೀಫ್ (12) ಮೃತ ಬಾಲಕ.…
ಮೊಬೈಲ್ ಕರೆಯಲ್ಲಿ ನಿರತವಾಗಿದ್ದ ನರ್ಸ್ ನಿಂದ ನಡೆಯಿತು ಮಹಾ ಎಡವಟ್ಟು! ಮಹಿಳೆಯೊಬ್ಬರಿಗೆ ಒಂದೇ ಸಲ ಎರಡು ಬಾರಿ ಕೋವಿಡ್ ಲಸಿಕೆ ನೀಡಿ ಅವಾಂತರ!
ಲಕ್ನೊ: ಮೊಬೈಲ್ ಕರೆಯಲ್ಲಿ ನಿರತವಾಗಿದ್ದ ದಾದಿಯೊಬ್ಬಳು ಮಹಿಳೆಯೊಬ್ಬರಿಗೆ ಒಂದೇ ಸಲ ಎರಡು ಬಾರಿ ಕೋವಿಡ್ -19 ಲಸಿಕೆಯ ಡೋಸ್ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಅಕ್ಬರ್ ಪುರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್…
ಯುವರತ್ನ ಮನವಿಗೆ ಸ್ಪಂದಿಸಿದ ಬಿ.ಎಸ್.ವೈ! ಸಿನಿ ಪ್ರಿಯರಿಗೆ ಸಿಹಿ ಸುದ್ಧಿ! ಚಿತ್ರಮಂದಿರದಲ್ಲಿ ಸದ್ಯಕ್ಕಿಲ್ಲ 50 : 50
ಬೆಂಗಳೂರು: ಕನ್ನಡ ಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಏಪ್ರಿಲ್ 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರನ್ನು ಭೇಟಿ ಮಾಡಿದ್ದ ಪುನೀತ್ ರಾಜಕುಮಾರ್ ಒಳಗೊಂಡ “ಯುವರತ್ನ” ಚಿತ್ರತಂಡ ಪರಿಸ್ಥಿತಿಯನ್ನು ಮನವರಿಕೆ…
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಪೋಲೀಸ್ ಅಧಿಕಾರಿಗೆ ಕಾರುಡಿಕ್ಕಿ ಹೊಡೆದು ಪರಾರಿ! ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪೋಲೀಸ್ ಹೆಡ್‌ಕಾನ್ಸ್‌ಟೇಬಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು
ಹಾಸನ: ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಕರ್ತವ್ಯ ನಿರತ ನಗರದ ಟ್ರಾಫಿಕ್ ಹೆಡ್‌ಕಾನ್ಸ್‌ಟೇಬಲ್ ಶನಿವಾರ ಸಂಜೆ ಅಸುನೀಗಿದರು. ಮಧುಸೂದನ್(44) ಮೃತ ದುರ್ದೈವಿ. ಹಾಸನ-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಗಾಡೇನಹಳ್ಳಿ ಸಮೀಪ ಇಂಟರ್ ಸೆಪ್ಟರ್ ನಲ್ಲಿ ಅಧಿಕಾರಿಗಳು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ…
ಗುರುಪುರ ಕುಕ್ಕುದಕಟ್ಟೆಯ ಮನೆಯಲ್ಲಿ ಅಗ್ನಿ ಅವಘಡ ಅಪಾರ ಹಾನಿ
ಮಂಗಳೂರು : ಮಂಗಳೂರು ಸಮೀಪದ ಗುರುಪುರದ ಕುಕ್ಕುದಕಟ್ಟೆಯ ನಿವಾಸಿ ಕೃಷ್ಣ ಪೂಜಾರಿಯ ಮನೆಯಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅನಾಹುತದಿಂದ ಲಕ್ಷಾಂತರ ರೂ ಮೌಲ್ಯದ ಬಟ್ಟೆಬರೆ, ನಗದು, ಕಪಾಟು, ಮೇಲ್ಛಾವಣಿ ಹಾಗೂ ಹೆಂಚು ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ…
ಬೆಂಗಳೂರಿನಿಂದ ಧರ್ಮಸ್ಥಳದ ಕಡೆ ಬರುತ್ತಿದ್ದ ಬಸ್ ಪಲ್ಟಿ
ಬೆಳ್ತಂಗಡಿ: ಬೆಂಗಳೂರಿನಿಂದ ಧರ್ಮಸ್ಥಳದ ಕಡೆ ಬರುತ್ತಿದ್ದ ಖಾಸಗೀ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ-ನಿಡ್ಲೆ ರಸ್ತೆ ಮದ್ಯೆಯಲ್ಲಿ ನಡೆದಿದೆ. ನಾಳೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದ್ದು ವಧು ವರ…
ಕೊರೋನಾ ಪಾಸಿಟಿವ್ ಬಂದ ಯುವತಿಯನ್ನು 13 ದಿನಗಳ ಕಾಲ ಗ್ರಾಮದಿಂದ ಹೊರಗಿಟ್ಟ ಗ್ರಾಮಸ್ಥರು!
ಹೈದರಾಬಾದ್: ಮಹಾಮಾರಿ ಕರೊನಾ ವೈರಸ್ ಸೋಂಕು ಬಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ಯಾರು ಸಹ ಅತ್ಯಂತ ಕೀಳಾಗಿ ನೋಡಬಾರದು. ಸಾಮಾನ್ಯರಂತೆಯೇ ಅವರೊಬ್ಬ ರೋಗಿಯೇ ಹೊರತು ತೀರ ಬೇಡವಾದವರು ಎಂಬಂತೆ ನೋಡಬಾರದು ಎಂದು ಎಷ್ಟೇ ಅರಿವು ಮೂಡಿಸಿದರು ಅಂತಹ ಕಹಿ ಘಟನೆಗಳು ಮರುಕಳಿಸುತ್ತಿರುವುದು ನಾಚಿಕೆಗೇಡಿನ…
ವಿಶ್ವದ ಅತೀ ದುಬಾರಿ ತರಕಾರಿಯನ್ನು ಬೆಳೆದ ಬಿಹಾರದ ರೈತ! ಒಂದು ಕೆ.ಜಿ ತರಕಾರಿಗೆ 1ಲಕ್ಷ ಮೌಲ್ಯ! ರೈತನ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿದ ಐಎಎಸ್ ಅಧಿಕಾರಿ!
ಪಾಟ್ನಾ: ಬಿಹಾರದ ರೈತರೊಬ್ಬರು ವಿಶ್ವದ ಅತೀ ದುಬಾರಿ ತರಕಾರಿಯನ್ನ ಬೆಳೆದಿದ್ದಾರೆಂದು ಭಾರೀ ಸುದ್ದಿಯಾಗ್ತಿದೆ. ಈ ಬೆಳೆ ಭಾರತದ ರೈತರಿಗೆ ಗೇಮ್ ಚೇಂಜರ್ ಆಗಲಿದೆ ಎಂದು ಐಎಎಸ್ ಅಧಿಕಾರಿಯೊಬ್ಬರು ಶ್ಲಾಘಿಸಿದ್ದು, ರೈತನ ಸ್ಟೋರಿ ಈಗ ವೈರಲ್ ಆಗ್ತಿದೆ. ಬಿಹಾರದಲ್ಲಿ ಇದೇ ಮೊದಲ ಬಾರಿಗೆ,…
ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಜನ್ಮಜಯಂತಿ ಆಚರಣೆ
ತುಮಕೂರು: ಇಂದು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಜನ್ಮಜಯಂತಿಯನ್ನು ಆಚರಿಸಲಾಯಿತು . ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಮಠ, ಗದ್ದುಗೆ ಪೂಜೆ, ಮಕ್ಕಳ ನಾಮಕರಣದ ಮೂಲಕ ಜನ್ಮದಿನ ಕಾರ್ಯಕ್ರಮ ನೆರವೇರಿತು. ಬೆಳಗ್ಗೆಯಿಂದ…
ದ.ಕ ಜಿಲ್ಲಾ ನೂತನ ಎಸ್ಪಿ ಯಾಗಿ ರಿಷಿಕೇಶ್ ಭಗವಾನ್ ಸೋನಾವಣೆ ನೇಮಕ
ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ರಿಷಿಕೇಶ್ ಭಗವಾನ್ ಸೋನಾವಣೆ ಯವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿರುವ ಡಾ.ಬಿ.ಎಂ ಲಕ್ಷ್ಮೀಪ್ರಸಾದ್ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಇದೇ ವೇಳೆ ವರ್ಗಾವಣೆ ಮಾಡಲಾಗಿದೆ.…
















