ಅನಧಿಕೃತವಿದ್ದ ದೇವಾಲಯಗಳನ್ನು ಅಧಿಕೃತ ಮಾಡಲಿ: ಡಾ. ಡಿ ವೀರೇಂದ್ರ ಹೆಗ್ಗಡೆ
ಮಂಗಳೂರು : ದೇವಸ್ಥಾನಗಳನ್ನು ನಿರ್ಮಾಣ ಮಾಡುವಾಗ ಅಧಿಕೃತವಾಗಿ ಕಾನೂನು ಪ್ರಕಾರ ಸರಿಯಾದ ಅನುಮತಿಗಳನ್ನು ತೆಗೆದುಕೊಂಡು ನಿರ್ಮಾಣ ಮಾಡುವುದು ಒಳ್ಳೆಯದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಸರಿಯಾದ…
ಕ್ರಿಕೆಟ್ ಕೆರಿಯರ್ ಗೆ ನಿವೃತ್ತಿ ಘೋಷಿಸಿದ ಲಂಕಾ ವೇಗಿ ಲಸಿತ್ ಮಾಲಿಂಗ!
ಕೊಲೊಂಬೋ: ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ನಿವೃತ್ತಿ ಘೋಷಣೆಯ ಸುದ್ದಿ ಪ್ರಕಟಿಸಿರುವ ಮಾಲಿಂಗ, ‘ನಾನು ನನ್ನ ಟಿ-20 ಶೂಗಳನ್ನು ಜೋತು ಹಾಕುತ್ತಿದ್ದೇನೆ. ಈ ಮೂಲಕ ಎಲ್ಲಾ ಮಾದರಿಯ…
ಹಿಂದೂ ಯುವ ನಾಯಕ, ಬಿಜೆಪಿ ಮುಖಂಡ ರಾಮ ಪ್ರಸಾದ್ ಮರೋಡಿ ಇನ್ನಿಲ್ಲ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಲಾರಗೋಳಿ ನಿವಾಸಿ, ಬಿಜೆಪಿ ಮುಖಂಡ ರಾಮ ಪ್ರಸಾದ್ ಮರೋಡಿ (37.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಪರೀತ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ಜಾಂಡೀಸ್ ರೋಗಕ್ಕೆ ತುತ್ತಾಗಿದ್ದರು.…
ಗುಜರಾತ್‍ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ!
ಗುಜರಾತ್: ಗುಜರಾತ್‍ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ.ಇಂದು ನಡೆದ ಬಿಎಲ್ ಪಿ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ…
ಪಠ್ಯ ಪೂರ್ಣಗೊಳಿಸಲು ಶಿಕ್ಷಕರ ರಜೆ ಕಡಿತ ಮಾಡಲು ಚಿಂತನೆ! : ಬಿ.ಸಿ. ನಾಗೇಶ್
ಶಿವಮೊಗ್ಗ: ಈ ಬಾರಿ ಪಠ್ಯ ಕಡಿತಗೊಳಿಸದೆ ಶಿಕ್ಷಕರ ರಜೆ ಕಡಿತಗೊಳಿಸಲಾಗುವುದು. ರಜೆ ಕಡಿಮೆಮಾಡಿ ಕಲಿಕಾ ಅವಧಿ ನಷ್ಟ ಸರಿದೂಗಿಸಲು ಚಿಂತನೆ ನಡೆಸಲಾಗಿದೆ. ಪಠ್ಯ ಕಡಿತಗೊಳಿಸದೆ ಪಾಠಗಳನ್ನು ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.…
ಧರ್ಮ ಜಾಗೃತಿ ಮತ್ತು ಸಮಾಜ ಸುಧಾರಣೆಗೆ ಧರ್ಮಸ್ಥಳ ಮಾದರಿ ಕ್ಷೇತ್ರ: ರಾಮಪ್ರಭು ಚಂದ್ರಹಾಸ ಮಹಾರಾಜ್
ಧರ್ಮಸ್ಥಳ: ಧರ್ಮ ಪ್ರಭಾವನೆಯೊಂದಿಗೆ ಧರ್ಮ ಜಾಗೃತಿ ಹಾಗೂ ಆಧ್ಯಾತ್ಮದ ಮೂಲಕ ಸಮಾಜ ಸುಧಾರಣೆಗೆ ಧರ್ಮಸ್ಥಳ ಇತರ ಎಲ್ಲಾ ದೇವಸ್ಥಾನಗಳಿಗೆ ಮಾದರಿ ಕ್ಷೇತ್ರವಾಗಿದೆ ಎಂದು ಚೆನ್ನೈನ ಇಸ್ಕಾನ್‌ನ ರಾಮಪ್ರಭು ಚಂದ್ರಹಾಸ ಮಹಾರಾಜ್ ಹೇಳಿದರು. ಅವರು ನಿನ್ನೆ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ 50ನೇ ವರ್ಷದ…
Breaking News : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ
ಗಾಂಧೀನಗರ: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಂಗತಿಯನ್ನು ಘೋಷಿಸಿದರು. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. …
ಧರ್ಮಸ್ಥಳ ಕೂಟದಕಲ್ಲು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ರಾಜ್ಯಾಧ್ಯಕ್ಷರ ಬೇಟಿ – ನಾಮಫಲಕ ಅಳವಡಿಕೆ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಟದಕಲ್ಲು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸುಂದರ ರವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರವರು ಬೇಟಿ ನೀಡಿ ಬಿಜೆಪಿ ನಾಮಫಲಕ ಅಳವಡಿಸಿದರು. ಈ ಸಂದರ್ಭದಲ್ಲಿ…
ಗಣೇಶ ಹಬ್ಬದಂದೆ ಗಣಪತಿ ಕಟ್ಟೆಯನ್ನು ಪುಡಿಗೈದ ಕಿಡಿಗೇಡಿಗಳು! ಕಡಬ ತಾಲೂಕಿನ ಉದನೆಯಲ್ಲಿ ನಡೆದ ಘಟನೆ!
ನೆಲ್ಯಾಡಿ: ಕಡಬ ತಾಲೂಕಿನ ಉದನೆಯಲ್ಲಿ ಯಾರೂ ಕಿಡಿಗೇಡಿಗಳು ಗಣಪತಿ ಕಟ್ಟೆಯನ್ನು ಪುಡಿ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಬೆಳಿಗ್ಗೆಯಷ್ಟೇ ಗಣೇಶೋತ್ಸವ ಅಚರಿಸಲ್ಪಟ್ಟ ಗಣಪತಿ ಕಟ್ಟೆಯನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಹಾನಿಗೊಳಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸ್ಥಳಕ್ಕೆ ಜಮಾಯಿಸಿದ್ದಾರೆ.…
ದೋಣಿ ಅಪಘಾತ: ಮೀನುಗಾರ ನೀರುಪಾಲು? ಮಂಗಳೂರಿನ ಪಣಂಬೂರು ಸಮುದ್ರತೀರದಲ್ಲಿ ನಡೆದ ಘಟನೆ!
ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಮೀನುಗಾರ ನೀರು ಪಾಲಾಗಿದ್ದಾರೆ. ಅಝರ್ ಮಾಲೀಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು, ಅವಘಡ ಸಂಭವಿಸಿ ನೀರುಪಾಲಾಗಿದ್ದ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ…
















