ಭೀಕರ ರಸ್ತೆ ಅಪಘಾತ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಸಾವು
ಬಳ್ಳಾರಿ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಎರಡು ಇನ್ನೊವಾ ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ನೀರಾವರಿ…
ಪೊಲೀಸ್ ಸಬ್-ಇನ್ಸ್‌ಪೆಕ್ಟರ್ 402 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆ ಸಂಖ್ಯೆ 08/ನೇಮಕಾತಿ-2/2021-22, ದಿನಾಂಕ :03-03-2021 ನ್ನು ಮುಂದುವರೆಸುತ್ತಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 402 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಿದೆ. ಈ…
ಸೂಪರ್ ಸ್ಟಾರ್ ರಜನಿಕಾಂತ್ 2019-20 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ
ನವದೆಹಲಿ: ತಮಿಳುನಾಡಿನ ವಿಧಾನಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷದ ಚಟುವಟಿಕೆ ಆರಂಭಿಸುವ ಹೊತ್ತಿನಲ್ಲೇ ಅನಾರೋಗ್ಯಕ್ಕಿಡಾಗಿ ಚುನಾವಣೆ ಹಾಗೂ ರಾಜಕಾರಣದಿಂದ ದೂರ ಇರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೆ ಸೂಪರ್ ಸ್ಟಾರ್ ಅಭಿಮಾನಿಗಳಿಗೊಂದು ಸಿಹಿಸುದ್ದಿ ಸಿಕ್ಕಿದಂತಾಗಿದೆ. ತಲೈವಾ ರಾಜಕೀಯದಿಂದ ದೂರ ಉಳಿದಿದ್ದರಿಂದ…
ಮೂರ್ಖರ ದಿನದ ಮುನ್ನಾ ದಿನವೇ ಮೂರ್ಖತನ ತೋರಿದ ದುಷ್ಕರ್ಮಿಗಳು! ದನಕಳ್ಳರೆಂದು ನೈತಿಕ ಪೊಲೀಸ್ ಗಿರಿ ಮಾಡಿದ ಅಪರಿಚಿತರ ತಂಡ
ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಸಂಬಂಧಿಕರ ಮನೆಗೆ ಹೋಗಿ ಟ ಮಾಡಿ ವಾಪಸ್ ಬರುವಾಗ ದನ ಕಳ್ಳರು ಎಂದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ…
ಹೊಸ ಆರ್ಥಿಕ ವರ್ಷಕ್ಕೆ ಜನಸಾಮಾನ್ಯರಿಗೆ ಶಾಕ್ ಕೊಟ್ಟ ಕೇಂದ್ರ ಸರಕಾರ! ಉಳಿತಾಯದ ಮೇಲಿನ ಬಡ್ಡಿ ಕಡಿತಗೊಳಿಸಿದ ಅಧಿಸೂಚನೆ ಹೊರಡಿಸಿದ ಹಣಕಾಸು ಸಚಿವಾಲಯ!
ನವದೆಹಲಿ: ಹೊಸ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಎಪ್ರಿಲ್ 1, 2021ರಿಂದ ಆರಂಭಗೊಳ್ಳುತ್ತಿರುವ ಹೊಸ ಆರ್ಥಿಕ ವರ್ಷದಲ್ಲಿ ಉಳಿತಾಯ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 2021…
ಬೆಳ್ತಂಗಡಿ ತಾಲೂಕಿನ ಗ್ರಾಮ ಗ್ರಾಮಗಳ ಅಭಿವೃದ್ಧಿಯ ಅಲೆಯಲ್ಲಿ ಕೊಚ್ಚಿ ಹೋದ ವಿ.ಪಕ್ಷಗಳ ನೆಲೆ ವೇಣೂರು ಗ್ರಾ.ಪಂ ಬಿ.ಜೆ.ಪಿ ತೆಕ್ಕೆಗೆ
ವೇಣೂರು: ವೇಣೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ 24 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 24 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದಾರೆ. ವೇಣೂರು ಗ್ರಾಮ ಪಂಚಾಯತಿಯ 24 ಸ್ಥ್ಥಾನಗಳಿಗೆ ಬಿಜೆಪಿ ಬೆಂಬಲಿತ…
ಬೆಳ್ತಂಗಡಿಯ ಕಾನರ್ಪ ನಿವಾಸಿ ನಿವೃತ್ತ ಯೋಧ ಮಂಜೇಶ್ವರದಲ್ಲಿ ರಸ್ತೆ ಅಪಘಾತದಲ್ಲಿ ದುರ್ಮರಣ
ಮಂಗಳೂರು: ಲಾರಿಯೊಂದು ಸ್ಕೂಟರಿನಲ್ಲಿ ತೆರಳುತ್ತಿದ್ದ ನಿವೃತ್ತ ಯೋಧರಿಗೆ ಅಪಘಾತ ನಡೆಸಿ ಪರಾರಿಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ ಅಪಘಾತದ ತೀವ್ರತೆಗೆ ನಿವೃತ ಯೋಧ ಸ್ಥಳದಲ್ಲೇ ಸಾವೀಗಿಡಾದ ಬಗ್ಗೆ ವರದಿಯಾಗಿದೆ. ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿಯಾಗಿರುವ, ಪ್ರಸ್ತುತ ಕಾಸರಗೋಡು ಜಿಲ್ಲೆಯ …
SVS ಕಾಲೇಜು ಸಮೀಪ ಖಾಸಗಿ ಬಸ್ ಅಪಘಾತ! ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಆರೋಗ್ಯ ಸಚಿವರು
ಬಂಟ್ವಾಳ: ಬಂಟ್ವಾಳ ಎಸ್.ವಿ.ಎಸ್ ಕಾಲೇಜ್ ಬಳಿ ಖಾಸಗಿ ಬಸ್ ಅಪಘಾತ ನಡೆದಿದ್ದು ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾದ ಮಾಹಿತಿ ತಿಳಿದು ಆರೋಗ್ಯ ಸಚಿವರಾದ ಡಾ.ಸುಧಾಕರ್ ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಆಸ್ಪತ್ರೆಗೆ ಬೇಟಿ…
ರಾಜ್ಯ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಸಾರಿಗೆ ಸಂಸ್ಥೆ!ಮುಷ್ಕರ ನಡೆಸಿದರೆ ವೇತನ ಕಡಿತದ ಎಚ್ಚರಿಕೆ!
ಬೆಂಗಳೂರು : ರಾಜ್ಯ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದು, ಏಪ್ರಿಲ್ 7 ರಿಂದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದಿನಿಂದ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕಡಿತ ಮಾಡಲಾಗುವುದು…
ಬಸ್ಸಿನಲ್ಲಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆ! ಲವ್ ಜಿಹಾದ್ ಶಂಕೆ!
ಉಡುಪಿ: ಉಡುಪಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಸರಸಸಲ್ಲಾಪದಲ್ಲಿ ನಿರತರಾಗಿದ್ದ ಅನ್ಯಕೋಮಿನ ಜೋಡಿಯನ್ನು ಸುರತ್ಕಲ್ ಬಳಿ ಬಸ್ ತಡೆದು ಬಜರಂಗದಳದ ಕಾರ್ಯಕರ್ತರು ಪೋಲೀಸರ ವಶಕ್ಕೆ ನೀಡಿದ ಘಟನೆ ವರದಿಯಾಗಿದೆ. ಹಿಂದು ಹೆಣ್ಣುಮಕ್ಕಳನ್ನು ಪುಸಲಾಯಿಸಿ ಲವ್ ಜಿಹಾದ್ ಮಾಡುತ್ತಿರುವ ಪ್ರಕರಣ ಮತ್ತೆ ಮತ್ತೆ ಮರುಕಳಿಸುತ್ತಿದ್ದು…
















