ಮಂಗಳೂರು – ಮಂತ್ರಾಲಯ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ!
ಮಂಗಳೂರು: ಮಂಗಳೂರು – ಮಂತ್ರಾಲಯ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸಂಚಾರವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿದರು. ಇದೇ ವೇಳೆ ಪ್ರಯಾಣಿಕರಿಗೆ ಶುಭ ಹಾರೈಸಿದ ಅವರು ಪ್ರಯಾಣಿಕರು ಇದರ…
ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಬೆಂಗಳೂರಿಗೆ ಆಗಮನ!
ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರು, ಭದ್ರಾವತಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ…
ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ s ಅಂಗಾರ ರವರು ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿದರು
ಮಂಗಳೂರು: ಬೆಂಗಳೂರಿನಿಂದ ರಾಜ್ಯ ಸರಕಾರದ ನೂತನ ಸಚಿವರಾದ ಎಸ್ ಅಂಗಾರ ರವರು ಮಂಗಳೂರು ಏರ್ಪೋರ್ಟ್ ಮೂಲಕ ಆಗಮಿಸಿ ಶ್ರೀ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ನಾಯಕರು ಪಕ್ಷದ ಕಾರ್ಯಕರ್ತರು…
ಜೀವಂತ ಮೊಲ ಸಿಗದ ಹಿನ್ನೆಲೆಯಲ್ಲಿ “ಸಂಕ್ರಾಂತಿ” ಮುಂದೂಡಿದ ಗ್ರಾಮಸ್ಥರು!
ಚಿತ್ರದುರ್ಗ: ಜೀವಂತ ಮೊಲ ಸಿಗದ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದ ಜನ ಸಂಕ್ರಾಂತಿ ಹಬ್ಬವನ್ನೇ ಮುಂದೂಡಿದ ಘಟನೆ ವರದಿಯಾಗಿದೆ. ಕಂಚೀವರದರಾಜಸ್ವಾಮಿ ಭಕ್ತರು ಮಕರ ಸಂಕ್ರಾಂತಿ ದಿನ ಕಾಡಿನಲ್ಲಿ ಬೇಟೆಯಾಡಿ ಮೊಲವೊಂದನ್ನು ಜೀವಂತವಾಗಿ ಹಿಡಿದು ದೇಗುಲಕ್ಕೆ ತರುತ್ತಾರೆ. ನಂತರ ಅದರ ಕಿವಿಚುಚ್ಚಿ…
ಸಪ್ತ ಸಚಿವರಿಗೆ ಖಾತೆ ಹಂಚಿಕೆ: ಹಾಗಾದರೆ ಯಾರ್ಯಾರಿಗೆ ಯಾವ ಖಾತೆ? 10 ಸಚಿವರ ಖಾತೆಯಲ್ಲಿ ಬದಲಾವಣೆ!
ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಯೊಂದು ಇಂದು ನಡೆದಿದ್ದು ಕರಾವಳಿಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರ ಸೇರಿದಂತೆ 7 ಮಂದಿಯನ್ನು ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದ್ದು ಈ ಪೈಕಿ 7 ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ 10 ಸಚಿವರ ಖಾತೆಯಲ್ಲಿ…
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!
ಬೆಂಗಳೂರು : ಮುಂದಿನ ಎರಡು ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೂ ಕೂಡ ಮಳೆ ಇನ್ನೂ ಮುಗಿದಿಲ್ಲ, ಇಂದೂ ಕೂಡ ಬರುವ ಸಾಧ್ಯತೆ…
ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೋ ಸಂಚಾರಕ್ಕೆ ನಾಳೆ ಸಿಎಂ ಬಿಎಸ್ವೈ ರಿಂದ ಹಸಿರು ನಿಶಾನೆ!
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಮೊದಲ ವಿಸ್ತಾರಿತ ಮಾರ್ಗವಾದ ಯಲಚೇನಹಳ್ಳಿ-ಅಂಜನಾಪುರ ನಡುವೆ ಮೆಟ್ರೋ ಸಂಚಾರಕ್ಕೆ ಸಿಎಂ ಬಿಎಸ್ವೈ ಹಸಿರು ನಿಶಾನೆ ತೋರಿಸಲಿದ್ದಾರೆ. ಇದೇ ತಿಂಗಳು 15ರಿಂದ ರೀಚ್-4 ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಸಂಕ್ರಾಂತಿ ಹಬ್ಬದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು…
ತುಳು ಚಿತ್ರನಟ ರೂಪೇಶ್ ಶೆಟ್ಟಿ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತ
ಶಿರಾಡಿ: ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ನಿರ್ದೇಶಕ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ನಡೆದಿದೆ. ರೂಪೇಶ್ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಅವರಿಗೆ…
ಸುಳ್ಯ ಶಾಸಕ ಅಂಗಾರ ಸೇರಿದಂತೆ 7 ಮಂದಿ ನೂತನ ಸಚಿವರಾಗಿ ಆಯ್ಕೆ! ಸಚಿವ ಸ್ಥಾನದ ಅಕಾಂಕ್ಷಿಗಳಾದ ಪ್ರಮುಖರಿಗೆ ನಿರಾಸೆ!
ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ತನ್ನ ಸಂಪುಟ ವಿಸ್ತರಣೆಯನ್ನು ನಡೆಸಿದ್ದು, ಒಟ್ಟು 7 ಮಂದಿ ನೂತನ ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಎಸ್.ಅಂಗಾರ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್ ರನ್ನು ಸಂಪುಟಕ್ಕೆ…
ಸ್ಮಾರ್ಟ್‌ಫೋನ್ ‘ಫ್ರೀಡಂ 251′ ರಿಂಗಿಂಗ್ ಬೆಲ್ಸ್‌ನ ಸಂಸ್ಥಾಪಕ ಮೋಹಿತ್ ಗೋಯೆಲ್’ ಬಂಧನ!
ನೋಯ್ಡಾ: ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ ‘ಫ್ರೀಡಂ 251’ ಅನ್ನು ನೀಡಿದ ರಿಂಗಿಂಗ್ ಬೆಲ್ಸ್‌ನ ಸಂಸ್ಥಾಪಕ ಮೋಹಿತ್ ಗೋಯೆಲ್’ನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಒಣ ಹಣ್ಣುಗಳ ವ್ಯಾಪಾರಿಗಳನ್ನು 200 ಕೋಟಿ ರೂ.ಗೆ ವಂಚಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ದುಬೈ ಡ್ರೈ ಫ್ರೂಟ್ಸ್ ಮತ್ತು…