ಕೆ.ಜಿ.ಎಫ್ ೨ ಬಿಡುಗಡೆ ಮುನ್ನ ಸುಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ ಯಶ್
ಧರ್ಮಸ್ಥಳ: ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು ಬಳಿಕ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರನ್ನು…
ಬಿಸಿಲ ಬೇಗೆಯ ತಣಿಸುವ ಬೇಲ್ವತೆ ಹಣ್ಣು, ದೇಹದ ಹಲವು ಸಮಸ್ಯೆಗಳಿಗೂ ರಾಮಭಾಣ
ಬೇಸಿಗೆ ಕಾಲದಲ್ಲೇ ಹೆಚ್ಚಾಗಿ ಸಿಗುವ ಬೇಲ್ವತೆ ಹಣ್ಣು(Wood Apple) ಸೇವನೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್, ಖನಿಜಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತಾಮ್ರ ಮತ್ತು…
ಚೀನಾದಲ್ಲಿ 133ಜನ ಪ್ರಯಾಣಿಸುತ್ತಿದ್ದ ವಿಮಾನ ಪತನ
ಬೀಜಿಂಗ್: ದಕ್ಷಿಣ ಚೀನಾದ ಗೌಂಗೈಕಿ ಪ್ರಾಂತ್ಯದಲ್ಲಿ ಪ್ರಯಾಣಿಕರ ವಿಮಾನ ಪತನವಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಜನ ಪ್ರಯಾಣಿಸುತ್ತಿದ್ದರು. ಅವರೆಲ್ಲಾ ಮೃತಪಟ್ಟಿರುವ ಶಂಕೆ ಇದೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಪರಿಹಾರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿದೆ…
ಮದರಸಾಗಳಲ್ಲಿ ಹೊಸ ಶಿಕ್ಷಣ ಪದ್ಧತಿ ಜಾರಿಗೆ ಚಿಂತನೆ : ಸಚಿವ ಬಿ.ಸಿ.ನಾಗೇಶ್
ಗೋಕರ್ಣ : ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಈ ಹಿನ್ನೆಲೆಯಲ್ಲಿ ಮದರಸಾಗಳಲ್ಲಿ ಹೊಸ ಶಿಕ್ಷಣ ಪದ್ಧತಿ ಜಾರಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು…
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ತಪ್ಪೇನು? : ಸಿಎಂ ಬಸವರಾಜ ಬೊಮ್ಮಾಯಿ
ಯಾದಗಿರಿ : ‘ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿ, ನೈತಿಕತೆ ಬೆಳೆಯುತ್ತದೆ. ಗುಜರಾತ್ ರಾಜ್ಯದಂತೆ ನಮ್ಮಲ್ಲಿಯೂ ಭಗವದ್ಗೀತೆ ಬೋಧಿಸಿದರೆ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ‘ಗುಜರಾತ್‌ನ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲಾಗಿದೆ. ಭಗವದ್ಗೀತೆ ಬೋಧನೆಯಿಂದ ಮಕ್ಕಳಿಗೆ…
ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕ್ಯಾಮೆರಾ ಟ್ಯಾಪಿಂಗ್ ನಲ್ಲಿ ಕಾಣಿಸಿಕೊಂಡ ಕರಡಿ, ಚಿರತೆ!
ಬೆಳ್ತಂಗಡಿ: ಹುಲಿ ಗಣತಿ ಯೋಜನೆಯ ಆಂಗ ವಾಗಿ ನಡೆಯುತ್ತಿರುವ ಕ್ಯಾಮೆರಾ ಟ್ಯಾಪಿಂಗ್‌ನಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುರುಬರ ಗುಡ್ಡದ ಕಾಡು ಮನೆ ಪ್ರದೇಶದಲ್ಲಿ ಇರಿಸಲಾಗಿರುವ ಕ್ಯಾಮೆರಾದಲ್ಲಿ ಚಿರತೆ, ಕರಡಿ ಚಲನವಲನದ ದೃಶ್ಯ ಸೆರೆಯಾಗಿವೆ. ಈ ಪ್ರದೇಶದಲ್ಲಿ ಚಿರತೆ, ಕರಡಿ ಓಡಾಟ…
ಭೂ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌ಗಿದೆ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ(Municipal Corporation Coverage) ಬರುವ ಭೂಮಿಯ ಸರ್ವೆ(land Survey) ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್(Tehsildar)ಗಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್…
ಗೃಹರಕ್ಷಕ ಇಲಾಖೆಯ ಘಟಕಾಧಿಕಾರಿ ಜಯಾನಂದ ಲಾಯಿಲ ಮುಖ್ಯಮಂತ್ರಿಗಳ ಚಿನ್ನದ ಪದಕ’ ಗೌರವ ಪ್ರಶಸ್ತಿಗೆ ಆಯ್ಕೆ
ಬೆಳ್ತಂಗಡಿ: ಗೃಹರಕ್ಷಕ ಇಲಾಖೆಯ ಬೆಳ್ತಂಗಡಿ ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಾನಂದ ಲಾಯಿಲ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ’ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳ್ತಂಗಡಿ ಗೃಹರಕ್ಷಕ ದಳದಲ್ಲಿ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಾನಂದ ಅವರು 1989ರಲ್ಲಿ ಗೃಹರಕ್ಷಕ…
ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಹಿಜಾಬ್ ವಿವಾದಕ್ಕೆ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್!
ಬೆಂಗಳೂರು: ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿದ ಹಿಜಾಬ್ ಪ್ರಕರಣಕ್ಕೆ ಇಂದು ಮಹತ್ತರದ ತೀರ್ಪು ಪ್ರಕಟ ವಾಗಿದೆ. ಪ್ರತಿಭಟನೆಗಳು, ಆರೋಪ, ಪ್ರತ್ಯಾರೋಪಗಳು ಮತ್ತು ಒಂದರ ಹಿಂದೊಂದು ವಿಚಾರಣೆಗಳ ನಂತರ, ಕರ್ನಾಟಕ ಹೈಕೋರ್ಟ್ ಇಂದು ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಿದೆ. ಹಿಜಾಬ್ ಧರಿಸಿವುದು ಇಸ್ಲಾಂ…
ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಒದಗಿಸುವ ಚುಚ್ಚು ಮದ್ದು ನೀಡಿ ವಂಚಿಸಿದ ನಕಲಿ ವೈದ್ಯ ಜೋಡಿಯ ಬಂಧನ!
ತುಮಕೂರು: ಮಕ್ಕಳಿಲ್ಲದ ದಂಪತಿಗಳನ್ನು ಗುರಿಯಾಗಿಸಿಕೊಂಡು ಮಕ್ಕಳಾಗುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದ ದಂಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ದಂಪತಿಯಿಂದ ದಾರಿತಪ್ಪಿದವರು ಹಣ ಕಳೆದುಕೊಂಡಿದ್ದಾರೆ. ಕೆಲವರು ಆರೋಗ್ಯವನ್ನೂ ಕಳೆದುಕೊಂಡು ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ವೈದ್ಯ ದಂಪತಿ ಎಂದು ಹೇಳಿಕೊಂಡಿದ್ದ ದಂಪತಿಯನ್ನು ತುಮಕೂರು ಜಿಲ್ಲೆಯ ನೊಣವಿನಕೆರೆ…