ಬೆಳ್ತಂಗಡಿ ಪೋಲಿಸ್ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪ್ರದಾನ
ಬೆಂಗಳೂರು: ವಿಧಾನಸೌಧದ ಬ್ವಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕ್ ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಈ ಗೌರವಕ್ಕೆ ಪಾತ್ರವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ…
ಪುತ್ತೂರಿನ ಪ್ರತಿಷ್ಠಿತ ಪಾರ್ಮ್ ಹೌಸ್‌ವೊಂದರಲ್ಲಿ ಜಾರ್ಖಾಂಡ್ ಮೂಲದ ಯುವತಿಯ ಅತ್ಯಾಚಾರ!
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಪಾರ್ಮ್ ಹೌಸ್‌ವೊಂದರಲ್ಲಿ ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಯ ಬಳಿಕ ಯುವತಿಯ ಮೇಲೆ ಬಲತ್ಕಾರ ನಡೆದ ಕುರಿತು ನೊಂದ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಘಟನೆಯು ಫೆ. 6ರಂದು ನಡೆದಿದ್ದು ತಡವಾಗಿ ಬೆಳಕಿಗೆ…
ತಾಲೂಕಿನ ಮೊದಲ ಗ್ರಾ.ಪಂ ಬಿಜೆಪಿ ತೆಕ್ಕೆಗೆ ಕಮಲ ಪಾಳಯಕ್ಕೊಳಿದ ಕಡಿರುದ್ಯಾವರ ಗ್ರಾಮ ಪಂಚಾಯತ್! ಅಧ್ಯಕ್ಷರಾಗಿ ಅಶೋಕ್ ಕುಮಾರ್ ಉಪಾಧ್ಯಕ್ಷರಾಗಿ ಶ್ರೀಮತಿ ಬೇಬಿ ಅವಿರೋಧ ಆಯ್ಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಬೇಬಿ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತಾಲೂಕಿನ 48 ಪಂಚಾಯತ್ ಗಳಿಗೆ ನಡೆದ ಚುನಾವಣೆಯಲ್ಲಿ ಇಂದು ಕಡಿರುದ್ಯಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷ…
ಶಶಿಕಲಾ ನಟರಾಜನ್ ಬೆಂಬಲಿಗರ ಕಾರು ಅಗ್ನಿಗಾಹುತಿ! ಅಪಾರ ಪ್ರಮಾಣದ ಪಟಾಕಿ ತುಂಬಿದ ಕಾರಣ ಹೊತ್ತಿ ಉರಿದ ಕಾರು
ಚೆನ್ಮೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಕಲಾ ಸ್ವಾಗತಕ್ಕೆ ಕಾಯುತ್ತಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಕಾರುಗಳು ಸುಟ್ಟು ಕರಕಲಾಗಿದೆ. ಕೃಷ್ಣಗಿರಿ ಸಮೀಪದ ಟೋಲ್ ಗೇಟ್ ಬಳಿಯಲ್ಲಿ ಶಶಿಕಲಾ ನಟರಾಜನ್…
ಬೈಕ್‌ನಲ್ಲಿ ಶಿವಾಜಿಯ ಸ್ಟಿಕ್ಕರ್ ಹಾಕಿದ ನೆಪವೊಡ್ಡಿ ಹಿಂದೂ ಕಾರ್ಯಕರ್ತನಿಗೆ ಹಲ್ಲೆ! ಹಲ್ಲೆನಡೆಸಿದ ಆರೋಪಿಗಳು ಪರಾರಿ!
ಮಂಗಳೂರು: ನಗರದ ಪಬ್ಬಾಸ್ ಬಳಿ ಬೈಕ್‌ನಲ್ಲಿ ಶಿವಾಜಿಯ ಸ್ಟಿಕ್ಕರ್ ಹಾಕಿದ ಎಂಬ ನೆಪವೊಡ್ಡಿ ಹಿಂದೂ ಕಾರ್ಯಕರ್ತ ದೀಪಕ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾದ ಘಟನೆ ವರದಿಯಾಗಿದೆ. ಮಂಗಳೂರಿನ ಲಾಲ್ ಬಾಗ್ ಸಮೀಪ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ದೀಪಕ್…
ಮನುಷ್ಯನ ಕ್ರೂರ ಕೃತ್ಯಕ್ಕೆ ಕಾಮದೇನು ಬಲಿ! ನಾಡಬಾಂಬ್ ತಿಂದು ನರಳಾಡಿ ಪ್ರಾಣ ಬಿಟ್ಟ ಗೋ ಮಾತೆ!
ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹೊಸೂರಿನಲ್ಲಿ ಕಾಡು ಹಂದಿಯ ಬೇಟೆಗಾಗಿ ಇಟ್ಟಿದ್ದಂತ ನಾಡ ಬಾಂಬ್ ನ್ನು ಹಸುವೊಂದು ತಿಂದಿದ್ದರಿಂದಾಗಿ, ಅದರ ಬಾಯಿ ಚಿದ್ರಗೊಂಡು, ಗಂಭೀರವಾಗಿತ್ತು. ಕೊನೆಗೆ ನರಳಿ ನರಳಿ ಹಸು ಸಾವನ್ನಪ್ಪಿದೆ. ಈ ಅಮಾನವೀಯ ಘಟನೆ ಕೋಲಾರದಲ್ಲಿ ವರದಿಯಾಗಿದ್ದು ಹಸು…
ರಿಷಿ ಗಂಗಾ ಪವರ್ ಪ್ರಾಜೆಕ್ಟ್ ನಲ್ಲಿ ಬಿರುಕು! ಮುಳುಗುವ ಭೀತಿಯಲ್ಲಿ ಹಲವು ಜಿಲ್ಲೆಗಳು
ಉತ್ತರಾಖಂಡ: ಉತ್ತರ ಖಂಡದಲ್ಲಿ ಬಾರಿ ಹಿಮ ಕುಸಿತ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ, ಧೌಲಿಗಂಗಾ ನದಿಯಲ್ಲಿ ಸಾಕಷ್ಟು ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದೆ. ತಪೋವನ್ ಮೇಲಿರುವ ಅಣೆಕಟ್ಟು ಹೊಡೆದ ಪರಿಣಾಮ ತಗ್ಗು ಪ್ರದೇಶಗಳು ಮುಳುಗಿದ ಕಾರಣ ಬಾರಿ ಅನಾಹುತ ಸಂಭವಿಸಿದೆ.…
ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ ಸ್ವಚ್ಛತಾ ಅಭಿಯಾನ
ಬೆಳ್ತಂಗಡಿ: ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮುಂಡಾಜೆ ಕಾಪು ಉಳ್ಳಾಲ್ತಿ ಕಟ್ಟೆಯ ಬಳಿಯಿಂದ ಚಿಬಿದ್ರೆವರೆಗೆ ನಡೆಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಧರ್ಮರಕ್ಷಾ ವೇದಿಕೆ ಯ ಕಾರ್ಯಕರ್ತರಾದ ರೋಹಿತ್ ಕಜೆ,ಕಾರ್ಯದರ್ಶಿ ಗಣೇಶ್ ಬೆಂದ್ರಾಳ,ಅಖಿಲ್ ಕಜೆ,ರಾಜೇಶ್ ಮುಂಡೈಲ್,ಅಕ್ಷಯ್, ಪ್ರಣಾಮ್,ರಾಜೇಶ್ ಮೂರ್ಜೆ, ಚಿದಾನಂದ…
ಧರ್ಮಸ್ಥಳ 15ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚತುಷ್ಪಥ ರಸ್ತೆ ಲೋಕಾರ್ಪಣೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಪರ್ಕಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ 15 ಕೋ.ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಯನ್ನು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರವರು ಲೋಕಾರ್ಪಣೆಗೊಳಿಸಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರುಗೊಂಡ 15 ಕೋ.ರೂ. ಮೊತ್ತದಲ್ಲಿ 2 ಕಿ.ಮೀ.…
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇಟಿ
ಬೆಳ್ತಂಗಡಿ: ಲೋಕೋಪಯೋಗಿ ಇಲಾಖೆ ಸಚಿವ, ರಾಜ್ಯ ಉಪಮುಖ್ಯಮಂತ್ರಿಯಾದ ಗೋವಿಂದ ಎಂ. ಕಾರಜೋಳ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು…
















