ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ನಡೆದ ಪಿಲಿನಲಿಕೆ ಕಾರ್ಯಕ್ರಮ ಮನಸೂರೆಗೊಳ್ಳುವಂತೆ ಮಾಡಿದ ಧರ್ಮಸ್ಥಳ ಕ್ಲಾಸಿಕ್ ಟೈಗರ್ಸ್ ನ ಹುಲಿಕುಣಿತ
ಬೆಳ್ತಂಗಡಿ: ತಾಲೂಕಿನ ವಕೀಲರ ಭವನದ ಆವರಣದಲ್ಲಿ ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ನವರಾತ್ರಿ ವಿಶೇಷ ತುಳುನಾಡಿನ ವಿಶಿಷ್ಟ ಪರಂಪರೆಯಲ್ಲಿ ಒಂದಾದ ಪಿಲಿನಲಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮ ವೀಕ್ಷಿಸಲು ಬೆಳ್ತಂಗಡಿ ಆಸುಪಾಸಿನ ನಾಗರೀಕರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು…
ಪುತ್ತೂರಿನಲ್ಲಿ ಆಯಿಲ್ ಟ್ಯಾಂಕರ್ ಪಲ್ಟಿ ರಸ್ತೆಯುದ್ದಕ್ಕೂ ಚೆಲ್ಲಿದ ಆಯಿಲ್!!!
ಪುತ್ತೂರು: ಮಾಣಿ – ಮೈಸೂರು ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ಸುಶ್ರುತ ಆಸ್ಪತ್ರೆಯ ಬಳಿ ಆಯಿಲ್ ಟ್ಯಾಂಕರ್ ಅಪಘಾತವಾಗಿದ್ಧು ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಸಂಚರಿಸುವ ವಾಹನ ಚಾಲಕರು ಜಾಗೃತೆ ವಹಿಸಬೇಕಾಗಿ ವಿನಂತಿ
ನಿರಂತರ ಆನೆದಾಳಿಯಿಂದ ಕಂಗೆಟ್ಟ ರೈತರು, ಕೃಷಿ ಚಟುವಟಿಕೆಗಳಿಗೆ ಅಪಾರ ಹಾನಿ
ಬೆಳ್ತಂಗಡಿ: ಅರಣ್ಯ ಇಲಾಖೆಯಿಂದ ಆನೆ ದಾಳಿಗೆ ಸಂಬಂಧಿಸಿ ಆನೆ ಕಾಡಿಗಟ್ಟುವ ಅನೇಕ ಪ್ರಯತ್ನಗಳ ಮಧ್ಯೆಯೇ ಸೆ.30ರ ಶನಿವಾರ ರಾತ್ರಿ ತಾಲೂಕಿನ ಕಡಿರುದ್ಯಾವರ ಕಾನರ್ಪ ಸಮೀಪ ಗದ್ದೆ ಹಾಗೂ ಕೃಷಿ ಭೂಮಿಗಳಿಗೆ ದಾಳಿಯಿಟ್ಟು ಭತ್ತ ಹಾಗೂ ಇತರೆ ಕೃಷಿ ಸರ್ವನಾಶ ಮಾಡಿದೆ. ಕಡಿರುದ್ಯಾವರ…
ನೂತನವಾಗಿ ಸ್ಥಾಪನೆಯಾದ “ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಮಂಜ” ನೂತನ ಆಡಳಿತ ಮಂಡಳಿ ಅವಿರೋಧ ಆಯ್ಕೆ
ಬೆಳ್ತಂಗಡಿ: ಕಲ್ಮಂಜದಲ್ಲಿ ನೂತನವಾಗಿ ಸ್ಥಾಪನೆಯಾದ “ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಲ್ಮಂಜ” ಇದರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಧ್ಯಕ್ಷರಾಗಿ ಶ್ರೀ ರಮೇಶ್ ಗೌಡ ಗಲ್ಲೋಡಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಸೂರ್ಯನಾರಾಯಣ ಹೊಳ್ಳ ಪಜಿರಡ್ಕ ಅವರು ಅವಿರೋಧವಾಗಿ…
ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ ಕೋಡಿ ಶ್ರೀ ಅಚ್ಚರಿಯ ಭವಿಷ್ಯ ನುಡಿ
ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ’ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರಲಿದೆ, ಆತಂಕಪಡುವ ಅಗತ್ಯವಿಲ್ಲ. ಆದರೆ, ಕಾರ್ತಿಕ, ಸಂಕ್ರಾಂತಿ ವೇಳೆಗೆ…
ಸಾರಿಗೆ ಸಂಸ್ಥೆಯಲ್ಲೂ ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿ, ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನಕ್ಕೆ ಮುಂದಾದ NWKRTC
ಬೆಳಗಾವಿ: ಬಸ್‌ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಪ್ರಾಯೋಗಿಕ ಜಾರಿ ಬಗ್ಗೆ ಮಾಹಿತಿ ಹಂಚಿಕೊಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವ್ಯವಸ್ಥೆ ಯಶಸ್ವಿಯಾದರೆ, ಉಳಿದ ನಿಗಮಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು. ಸಾರಿಗೆ ಇಲಾಖೆಯು…
ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರ ಸನ್ನಿಧಿಯಲ್ಲಿ “ಮಾತೃ ಸಂಗಮ”
ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಾತೃಸಂಗಮ, ಕಾರ್ಯಕ್ರಮ ನೆರವೇರಿತು. ಸಾಹಿತಿ, ಆಧ್ಯಾತ್ಮಿಕ ಚಿಂತಕಿ ಡಾ.ವೀಣಾ ಬನ್ನಂಜೆ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ ‘ಹೆಣ್ಣಿನಲ್ಲಿ ಆದ್ರ್ರತೆ, ಭಕ್ತಿ, ಸಮರ್ಪಣೆಯ…
ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಚರಂಡಿಗೆ: ತೀರ್ಥಯಾತ್ರೆ ಪ್ರವಾಸದಲ್ಲಿದ್ದ ಹಲವರಿಗೆ ಗಾಯ
ಕೊಕ್ಕಡ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಆಗಮಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುತಿದ್ದ ಟೆಂಪೋವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದು ಹಲವರಿಗೆ ಗಾಯವಾದ ಘಟನೆ ಕೌಕ್ರಡಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಆಗಮಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುತಿದ್ದ…
ಪೆರಾಜೆ ಯುವಕ ಮಂಡಲ(ರಿ) ಪೆರಾಜೆ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಏಳು ಜನರ ಕ್ರಿಕೆಟ್ ಪಂದ್ಯಾಟ: ಶ್ರೀ ವಿಷ್ಣುಪೆರಾಜೆ ಚಾಂಪಿಯನ್
ಬಂಟ್ವಾಳ/ಮಾಣಿ: ಪೆರಾಜೆ ಯುವಕ ಮಂಡಲ(ರಿ) ಪೆರಾಜೆ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಏಳು ಜನರ ಕ್ರಿಕೆಟ್ ಪಂದ್ಯಾಟ ಪೆರಾಜೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.. ಶಿಕ್ಷಕ ಲಕ್ಷ್ಮೀಶ್ ಪಿ. ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಯುವಕ ಮಂಡಳದ ಅದ್ಯಕ್ಷರಾದ ಬಾಬು ಪೂಜಾರಿ…
ಮಳಲಿ ಮಸೀದಿಯ ವಿವಾದ: ಮಸೀದಿ ಆಡಳಿತ ಮಂಡಳಿಯ ಅರ್ಜಿ ವಜಾ
ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿರುವ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ((Malali Mosque Row Case) ಪ್ರಕರಣದಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ…