ಮಂಗಗಳ ಹಾವಳಿಯ ಬೆನ್ನಲ್ಲೇ ಇದೀಗ ಗಿಣಿಗಳ ಸರದಿ, ತೆಂಗು ಬೆಳೆಗಾರರನ್ನು ಸಂಕಟಕ್ಕೀಡು ಮಾಡಿದ ಗಿಣಿಯ ವೀಡಿಯೋ

ಮಂಗಳೂರು: ತೆಂಗಿನ ಮರವೇರಿ ಎಳನೀರನ್ನು ಗಟಗಟನೆ ಕುಡಿದು ಮುಗಿಸುವ ಮಂಗಗಳ ಉಪಟಳವನ್ನು ನೋಡಿದ್ದಿರಿ ಆದರೆ ಇದೀಗ ಕಾಲ ಬದಲಾಗುತ್ತಿದ್ದಂತೆ ಇಲ್ಲೋಂದು ಗಿಣಿ ತೆಂಗಿನ ಮರವೇರಿ ಎಳೆನೀರು ಕುಡಿಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ತೆಂಗು ಬೆಳೆಗಾರ ರೈತರನ್ನು ಅಚ್ಚರಿ ಮಾಡಿಸಿದೆ.

ಕೊಡಗಿನ ತಲಕಾವೇರಿಯಲ್ಲಿ ಭೂ ಸಮಾಧಿಯಾಗಿರುವ ಐವರ ಪೈಕಿ ಓರ್ವರ ಮೃತದೇಹ ಪತ್ತೆ! ಮುಂದುವರಿದ ಶೋಧ ಕಾರ್ಯಾಚರಣೆ

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಅರ್ಚಕರ ಮನೆಗಳ ಮೇಲೆ ಕುಸಿದು ಭೂಸಮಾಧಿಯಾಗಿರುವ ಐವರು ಅರ್ಚಕರ ಪೈಕಿ ಓರ್ವರ ಮೃತದೇಹ ಇಂದು ಪತ್ತೆಯಾಗಿದೆ. ನಿರಂತರ ಶೋಧ ಕಾರ್ಯಾಚರಣೆ ಕೈಗೊಂಡಿರುವ ಎನ್ ಡಿ ಆರ್ ಎಫ್ ತಂಡ ಒಂದು ಮೃತದೇಹ ಪತ್ತೆಹಚ್ಚಿದೆ. ಮೃತರನ್ನು…

ನೆರೆ ಪೀಡಿತ ಪ್ರದೇಶಗಳಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ತುರ್ತು ಸ್ಪಂದನೆ ಸಿಬ್ಬಂದಿ‌ಗಳ ಕಾರ್ಯಾಚರಣೆ.

ಬೆಳ್ತಂಗಡಿ : ತಾಲೂಕಿನಲ್ಲಿ ಬರುತ್ತಿರುವ ಮಹಾಮಳೆಗೆ ನದಿಗಳಲ್ಲಿ ಭೀಕರವಾಗಿ ತುಂಬಿಹರಿಯುತ್ತಿರುವ ನೀರಿನಿಂದ ಜನ ಭಯಭೀತರಾಗಿದ್ದು ಈ ನಡುವೆ ಕೆಲವು ನದಿಗಳಲ್ಲಿ ಮರಗಳು, ಮರದ ತುಂಡುಗಳು ಬಂದು ಭೀಕರತೆ‌ ಸೃಷ್ಟಿಸುತ್ತಿದೆ. ಈ ಮಳೆಯ ನಡುವೆ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ನೇತೃತ್ವದ ಬೆಳ್ತಂಗಡಿ ಪೊಲೀಸ್…

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ 25 ಲಕ್ಷ ರೂ. ದಂಡ!

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಅವಹೇಳನಾಕಾರಿ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ 25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಗುರುವಾಯನಕೆರೆಯ ಕೆ. ಸೋಮನಾಥ್ ನಾಯಕ್…

ಕಳೆದ ವರ್ಷದ ಕರಿಛಾಯೆ ಮಾಸುವ ಮುನ್ನವೇ ಮತ್ತೊಮ್ಮೆ ಜನರಿಗೆ ಶಾಕ್ ನೀಡಿದ ವರುಣ!

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಕಳೆದ ವರ್ಷದ ಕರಿಛಾಯೆ ಮಾಸುವ ಮುನ್ನವೇ ಮತ್ತೊಮ್ಮೆ ಜನರಿಗೆ ಶಾಕ್ ನೀಡಿದೆ ತಡರಾತ್ರಿ ಸುರಿದ ಧಾರಕಾರ ಮಳೆಗೆ ಬೆಳ್ತಂಗಡಿಯ ಪಶ್ಚಿಮ ಘಟ್ಟದ ತಪ್ಪಲಿನ ದಿಡುಪೆ ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನ ಜೀವನ ಅಸ್ಥವ್ಯಸ್ಥವಾಗಿದೆ.…

ಕೇರಳ ವಿಮಾನ ದುರಂತ ಇಬ್ಬರು ಪೈಲಟ್ ಸಹಿತ 16 ಮಂದಿ ಸಾವು!

ತಿರುವನಂತಪುರ: ದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿದ ವಿಮಾನ 35 ಅಡಿ ಆಳದ ಪ್ರಪಾಾತಕ್ಕೆ ಬಿದ್ದಿದೆ ಎಂದು ನಿರ್ದೇಶಕ ಅರುಣ್ ಕುಮಾರ್ ಮಾಹಿತಿಯನ್ನು…

ಕೇರಳ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ದುರಂತ

ಕ್ಯಾಲಿಕಟ್ : ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನ ಕೋಳಿಕ್ಕೊಡ್​ ವಿಮಾನ ನಿಲ್ದಾಣ ರನ್​ವೇನಲ್ಲಿ ಸ್ಕಿಡ್​ ಆಗಿದ್ದು, ಅಪ್ಪಳಿಸಿದ ರಭಸಕ್ಕೆ ಎರಡು ಭಾಗವಾಗಿದೆ. ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಭಾರಿ ಮಳೆಯ ನಡುವೆಯೇ ದುರ್ಘಟನೆ ಸಂಭವಿಸಿದ್ದು, ರಕ್ಷಣಾ…

ಮುಂದಿನ ನಾಲ್ಕುದಿನಗಳ ಕಾಲ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ!

ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತಗಳು ಉಂಟಾಗಿದ್ದು ಈ ರಸ್ತೆಯಲ್ಲಿ 7/08/2020ರಿಂದ 11/08/2020ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚಿನ ಮಳೆ ಹಾಗೂ ಗಾಳಿ…

ಕೇರಳದ ಇಡುಕ್ಕಿಯಲ್ಲಿ ಭೂ ಕುಸಿತಕ್ಕೆ 15 ಬಲಿ! 80ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ!

ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪ್ರಕೃತಿ ಮುನಿದಿದ್ದು, ಕೇರಳದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇಲ್ಲಿನ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 15 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ 50 ಮಂದಿ ಅವಶೇಷಗಳಡಿ…

‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ದಲ್ಲಿ ‘ದೇವಸ್ಥಾನ ರಕ್ಷಣೆ ಅಭಿಯಾನ’ದ ವಿಚಾರ ಸಂಕಿರಣ!

ಮಂಗಳೂರು: ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ ಕೇಂದ್ರ ಸರಕಾರವು ಕಾಯ್ದೆಯನ್ನು ರೂಪಿಸಬೇಕು ! : ಅನಿಲ ಧೀರ್, ರಾಷ್ಟ್ರೀಯ ಕಾರ್ಯದರ್ಶಿ, ಭಾರತ ರಕ್ಷಾ ಮಂಚ, ಒಡಿಶಾ ಅಭಿವೃದ್ಧಿಯ ಹೆಸರಿನಲ್ಲಿ ಒಡಿಶಾದಲ್ಲಿ ಅನೇಕ ಮಠಗಳನ್ನು ಅಲ್ಲಿಯ ಸರಕಾರ ನಾಶ ಮಾಡಿದೆ, ಇದರಿಂದ…

You Missed

ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!
ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”
ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ
ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ
ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ
ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ